×
Ad

ಕಾಸರಗೋಡು : ಖಾಸಗಿ ಆಸ್ಪತ್ರೆಯಲ್ಲಿ ರೋಗಿಯ ನಗದು ಕಳವುಗೈದ ಪ್ರಕರಣ, ಆರೋಪಿಯ ಸುಳಿವು ಪತ್ತೆ

Update: 2016-04-02 20:37 IST


ಕಾಸರಗೋಡು : ನಗರದ  ಖಾಸಗಿ ಆಸ್ಪತ್ರೆ ಯಲ್ಲಿ  ರೋಗಿಯ ನಗದು  ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ  ಆರೋಪಿಯ ಸುಳಿವು  ಕಾಸರಗೋಡು ಪೊಲೀಸರಿಗೆ ಲಭ್ಯವಾಗಿದೆ. ಆಸ್ಪತ್ರೆಯ  ಸಿ ಸಿ ಟಿ ವಿ ಕ್ಯಾಮಾರ ದಲ್ಲಿ ಶಂಕಿತನ   ಗುರುತು ಪತ್ತೆಯಾಗಿದೆ. ಈ ದ್ರಶ್ಯ ವನ್ನು ಕೆಂದ್ರೀಕರಿಸಿ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ.
2015 ರ  ಅಕ್ಟೋಬರ್ 20 ರಂದು  ನಗರದ ನುಳ್ಳಿಪ್ಪಾಡಿ  ಯಲ್ಲಿರುವ ಖಾಸಗಿ ಆಸ್ಪತ್ರೆಗೆ ತಲುಪಿದ್ದ   ಕುಂಬಳೆ ಸೂರಂಬೈಲ್ ನ  ಮಹಿಳೆಯ ಆರೂವರೆ ಪವನ್ ಚಿನ್ನಾಭರಣ , ಐದು ಸಾವಿರ ರೂ . ಮೊಬೈಲ್ ಒಳಗೊಂಡ ಬ್ಯಾಗನ್ನು  ಕಳವು ಮಾಡಲಾಗಿತ್ತು . ಮಹಿಳೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ  ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು , ಸಿ ಸಿ ಕ್ಯಾಮರಾ ದ್ರಶ್ಯ ವನ್ನು   ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News