×
Ad

ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕ್ ಶತಮಾನೋತ್ಸವಕ್ಕೆ ಚಾಲನೆ

Update: 2016-04-02 20:44 IST

 ಮೂಡುಬಿದಿರೆ: ನಮ್ಮಲ್ಲಿ ಸಹಕಾರದ ಕಾಯ್ದೆಗಳಿಗೆ ಶರವೇಗದಲ್ಲಿ ತಿದ್ದುಪಡಿಗಳಾಗುತ್ತಿವೆ. ಈ ಬೆಳವಣಿಗೆಗಳ ಹಿಂದೆ ಸಾಂಸ್ಥಿಕ ಉದ್ದೇಶಕ್ಕಿಂತ ವ್ಯಕ್ತಿಗತ ಹಿತಾಸಕ್ತಿಗಳೂ ಕಂಡು ಬರುತ್ತಿವೆ. ಇದರ ಬದಲಾಗಿ ಕಾನೂನಿನ ಸ್ಥಿರತೆಯಿದ್ದಾಗ ಸಹಕಾರದ ಸಬಲೀಕರಣ ಸಾಧ್ಯ ಎಂದು ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಹೇಳಿದರು.  ಅವರು ಮೂಡುಬಿದಿರೆಯ ಕೋ- ಆಪರೇಟಿವ್ ಸರ್ವಿಸ್ ಬ್ಯಾಂಕಿನ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶನಿವಾರ ಸಂಜೆ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಆರಂಭಗೊಂಡ 6ರಿಂದ ಸಹಕಾರ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾನೂನು ಮತ್ತು ಸಹಕಾರ ಕುರಿತು ಉಪನ್ಯಾಸ ನೀಡಿದರು

    
 . ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಚಿಂತನ ಸರಣಿ ಸಪ್ತಾಹವನ್ನು ಉದ್ಘಾಟಿಸಿ ಶತಮಾನೋತ್ಸವಕ್ಕೆ ಚಾಲನೆ ನೀಡಿದ 2ರಂದು ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿಯವರು ಮಾತನಾಡಿ ಎಲ್ಲರ ಸಹಕಾರದಿಂದ ಬ್ಯಾಂಕಿನ ಪ್ರಗತಿ ಮತ್ತು ಯಶಸ್ಸು ಸಾಧ್ಯವಾಗಿದೆ. ಶತಮಾನೋತ್ಸವದ ಅಂಗವಾಗಿ ಸದಸ್ಯರಿಗೆ 2 ಉಚಿತ ಶೇರುಗಳನ್ನು ನೀಡಲಾಗುವುದು ಎಂದು ಪ್ರಕಟಿಸಿ ಕಳೆದ ನೂರು ವರ್ಷಗಳಲ್ಲಿ ಬ್ಯಾಂಕು ಸಾಲ ವಸೂಲಾತಿಗಾಗಿ ನ್ಯಾಯಾಲಯದ ಮೆಟ್ಟಿಲೇರದೇ ಇರುವುದು ಸದಸ್ಯರ ವಿಶ್ವಾಸಾರ್ಹತೆಗೆ ಪ್ರೋತ್ಸಾಹಕ್ಕೆ ಸಾಕ್ಷಿ ಎಂದರು. ಚೌಟರ ಅರಮನೆಯ ಕುಲದೀಪ ಎಂ. ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್ ಸ್ವಾಗತಿಸಿದರು. ಪ್ರಾಧ್ಯಾಪಕ ಎಂ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಬ್ಯಾಂಕಿನ ನಿರ್ದೇಶಕ ಎಂ. ಪ್ರೇಮಾನಂದ ಪ್ರಭು ವಂದಿಸಿದರು. ಬ್ಯಾಂಕಿನ ನಿರ್ದೇಶಕರುಗಳು, ಸದಸ್ಯರು ಉಪಸ್ಥಿತರಿದ್ದರು. ಬಳಿಕ ಪ್ರಕಾಶ್ ಮಹಾದೇವನ್ ಮಂಗಳೂರು ಇವರಿಂದ ಕರೋಕೆ ಗಾನ ಮಾಧುರ್ಯ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News