‘ಅಸ್ಸಲಾಮ್ ಅಲೈಕುಂ’ ಜಗತ್ತಿನ ಅತ್ಯಂತ ಶ್ರೇಷ್ಠ ಶಾಂತಿಮಂತ್ರ: ಡಾ.ಸುಧಾ

Update: 2016-04-02 16:30 GMT

ಮಂಗಳೂರು, ಎ.2: ಅರಬಿಕ್ ಭಾಷೆಯಲ್ಲಿ ಧಾರಾಳ ಸಾಹಿತ್ಯಗಳಿವೆ ಮತ್ತು ಇಸ್ಲಾಮಿನ ಜೀವಸತ್ವವು ಅದರಲ್ಲಿ ಅಡಗಿದೆ. ಈ ಭಾಷೆಯಲ್ಲಿರುವ ಅಸ್ಸಲಾಮ್ ಅಲೈಕುಂ ಜಗತ್ತಿನ ಜನರಿಗೆ ಶಾಂತಿಯನ್ನು ಹಾರೈಸುತ್ತದೆ. ಜಗತ್ತಿನ ಎಲ್ಲ ಮಾನವರನ್ನು ಕಾಣುವಾಗಲು ಈ ಸಲಾಮನ್ನು ಹರಡಿದರೆ ಅದು ಲೋಕಶಾಂತಿಗೆ ಇರುವ ಮಂತ್ರವಾಗಲಿದೆ ಎಂದು ಬೆಸೆಂಟ್ ವುಮೆನ್ಸ್ ಕಾಲೇಜಿನ ಪ್ರೊಫೆಸರ್ ಡಾ.ಸುಧಾ ಅಭಿಪ್ರಾಯಿಸಿದರು.

ಮಂಗಳೂರಿನಲ್ಲಿ ಹಿದಾಯ ಫೌಂಡೇಶನ್ ನಡೆಸುತ್ತಿರುವ ಅರಬಿಕ್ ಶಿಕ್ಷಣ ತರಗತಿಯ ವಿಧ್ಯಾರ್ಥಿನಿಯರಿಗೆ ಶನಿವಾರ ಪದವಿ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.

ಅರಬಿಕ್ ಭಾಷೆ ಕಲಿಯುವುದರ ಮೂಲಕ ಅದರ ಸಂಶೋಧನೆ ಮತ್ತು ಅಧ್ಯಯನವನ್ನು ಮಾಡುವಲ್ಲಿ ಯುವತಿಯರು ಪ್ರಮುಖ ಪಾತ್ರವಹಿಸಬೇಕು ಎಂದವರು ಕರೆ ನೀಡಿದರು. ಮುಸ್ಲಿಮ್ ಸಮುದಾಯ ಮಾತ್ರವಲ್ಲ, ಸ್ವತಃ ನನಗೂ ಈ ಭಾಷೆಯನ್ನು ಅರಿತು ಅಧ್ಯಯನ ಮಾಡುವ ಕುತೂಹಲವಿದೆ. ಜಾಗತಿಕವಾಗಿ ಮುಸ್ಲಿಮ್ ಮಹಿಳೆಯರು ಮಂಡಿಸುತ್ತಿರುವ ಪ್ರಬಂಧ ಅರೇಬಿಯಲ್ಲಿರುವುದನ್ನು ನಾನು ಕಂಡಿದ್ದೇನೆ. ಹಾಗಾಗಿ ಪದವಿ ಅಥವ ಉದ್ಯೋಗದ ಅವಕಾಶಕ್ಕಾಗಿ ಈ ಭಾಷೆಯ ಪ್ರಯೋಜನ ಪಡೆಯುವುದಕ್ಕಿಂತ ಮಿಗಿಲಾಗಿ ಅದರ ಸಾರವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಲು ಕಲಿಯಿರಿ ಎಂದವರು ಹೇಳಿದರು.

  ದ.ಕ. ಪಿಯು ಕಾಲೇಜಿನ ಪ್ರಾಂಶುಪಾಲ ಸಂಘದ ಅಧ್ಯಕ್ಷೆ ಸರಸ್ವತಿ ಬಿ. ಮಾತನಾಡಿ, ಯಾವುದೇ ಧರ್ಮಗ್ರಂಥಗಳು ಅಧರ್ಮವನ್ನು ಬೋಧಿಸಲು ಸಾಧ್ಯವಿಲ್ಲ. ಹಾಗಾಗಿ ಕುರುಡರಂತೆ ಅದನ್ನು ಹಿಂಬಾಲಿಸದೆ ಅರಿತು ಹಿಂಬಾಲಿಸಬೇಕು.ಅರಿತುಕೊಳ್ಳಲು ಆಯಾ ಧರ್ಮ ಗ್ರಂಥದ ಭಾಷೆಯನ್ನು ನಾವು ಕಲಿಯಬೇಕು. ಆ ನಿಟ್ಟಿನಲ್ಲಿ ಕುರ್‌ಆನ್‌ನ ಭಾಷೆಯನ್ನು ವಿಧ್ಯಾರ್ಥಿನಿಯರಿಗೆ ಕಲಿಸಿ ಅವರನ್ನು ಕಲಿಸುವ ಶಿಕ್ಷಕಿಯರನ್ನಾಗಿ ತಯಾರು ಮಾಡುವ ಹಿದಾಯ ಪೌಂಡೇಶನ್ ಸೇವೆ ಪ್ರಶಂಸಾರ್ಹ ಎಂದರು. ಹಿದಾಯ ಫೌಂಡೇಶನ್ ಅರಬಿಕ್ ಶಿಕ್ಷಣ ತರಗತಿ ಕಳೆದ 7 ವರ್ಷದಲ್ಲಿ 163 ಯುವತಿಯರನ್ನು ತರಬೇತುಗೊಳಿಸಿ ಅವರನ್ನು ಜಿಲ್ಲೆಯ ವಿವಿಧ ಭಾಗದ 35 ಪ್ರಮುಖ ಶಾಲಾ ಕಾಲೇಜುಗಳಲ್ಲಿ ಅರೇಬಿಕ್ ಶಿಕ್ಷಕಿಯರನ್ನಾಗಿ ನೇಮಿಸಿದೆ ಈ ಮೂಲಕ ವಾರ್ಷಿಕ 35 ಸಾವಿರಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಅರಬಿಕ್ ಜ್ಞಾನವನ್ನು ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಇಂದಿರಾ ಪ್ರಿಯದರ್ಶಿಣಿ ಪ್ರಶಸ್ತಿ ವಿಜೇತೆ ರುಕ್ಸಾನ ಹಸನ್ ಹೇಳಿದರು. ಇಂದು ನಡದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ನಾಲ್ವರು ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಅವರ ಸಾಧನೆಯ ವೀಡಿಯೊ ಸಾಕ್ಷಚಿತ್ರವನ್ನು ಬಿಡುಗಡೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಸಾವಿರಾರು ಕುಟುಂಬಕ್ಕೆ ನೆರವಾದ ಮೈಸೂರಿನ ಲೀಲೂ ಸನಾ, ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪದವಿ ಕಾಲೇಜು ಆರಂಭಿಸಿ ಕ್ರಾಂತಿ ಮಾಡಿದ ಕಡಬದ ಫೌಝಿಯಾ ಮತ್ತು ಸಮೀರಾ, ಏಡ್ಸ್ ಪೀಡಿತ ಮಕ್ಕಳ ಬಾಳಿಗೆ ತಾಯಿಯಾದ ಮಂಗಳೂರಿನ ತಬಸ್ಸುಮ್ ಹಾಗೂ ಹಿದಾಯ ಫೌಂಡೇಶನ್ ವಿಶೇಷ ಮಕ್ಕಳ ತರಬೇತಿ ಸಂಸ್ಥೆಯ ಮುಖ್ಯಸ್ಥೆ ಪ್ರಿಯಾ ರೆಗೋ ಅವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News