ಇಬ್ಬರು ಆರೋಪಿಗಳ ರೂ. 10 ಕೋಟಿಗೂ ಹೆಚ್ಚಿನ ಆಸ್ತಿ ಮುಟ್ಟುಗೋಲು

Update: 2016-04-02 17:45 GMT

ಹೊಸದಿಲ್ಲಿ, ಎ.2: ಮಧ್ಯಪ್ರದೇಶದ ‘ವ್ಯಾಪಂ’ ಹಗರಣದಲ್ಲಿ ಹಣ ಚೆಲುವೆಗೆ ಸಂಬಂಧಿಸಿದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು(ಇ.ಡಿ.) ಇಬ್ಬರು ಆರೋಪಿಗಳ ರೂ. 10 ಕೋಟಿಗೂ ಹೆಚ್ಚಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಹಣ ಚೆಲುವೆ ತಡೆ ಕಾಯ್ದೆಯನ್ವಯ ಶ್ರೀ ಅರಬಿಂದೊ ವೈದ್ಯ ವಿಜ್ಞಾನ ಸಂಸ್ಥೆಯ (ಎಸ್‌ಎಐಎಂಎಸ್) ಡಾ. ವಿನೋದ್ ಭಂಡಾರಿ ಹಾಗೂ ಹಗರಣದ ರೂವಾರಿಯೆನ್ನಲಾಗಿರುವ ಡಾ. ಜಗದೀಶಸಿಂಗ್ ಸಾಗರ್ ಎಂಬವರ ವಿರುದ್ಧ ತಾತ್ಕಾಲಿಕ ಆಸ್ತಿ ಮುಟ್ಟುಗೋಲು ಆದೇಶವನ್ನು ಹೊರಡಿಸಲಾಗಿದೆ.
ಮಧ್ಯಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆಯು ಭಂಡಾರಿ ಹಾಗೂ ಸಾಗರ್‌ರ ವಿರುದ್ಧ ಆರೋಪ ಪಟ್ಟಿಯೊಂದನ್ನು ದಾಖಲಿಸಿವೆ. ವ್ಯಾಪಂ ನಡೆಸಿದ್ದ ಪ್ರಿ ಮೆಡಿಕಲ್ ಟೆಸ್ಟ್-2012 ಹಾಗೂ ಪ್ರಿ ಪಿ.ಜಿ. ಎಕ್ಸಾಮಿನೇಶನ್-2012 ಗಳಿಗೆ ಹಾಜ ರಾದ ವಿದ್ಯಾರ್ಥಿಗಳನ್ನು ಸಂದೇಹಾಸ್ಪದ ವಿಧಾನದಿಂದ ಆಯ್ಕೆ ಮಾಡಲು ತಮ್ಮ ಸಹಾಯಕರ ಮೂಲಕ ಅವರಿಂದ ಭಾರೀ ಪ್ರಮಾಣದ ಹಣವನ್ನು ಆರೋಪಿಗಳು ಹಲವರಿಂದ ಸಂಗ್ರಹಿಸಿದ್ದರೆಂದು ಅದರಲ್ಲಿ ಆರೋಪಿಸಲಾಗಿದೆಯೆಂದು ತನಿಖೆ ಸಂಸ್ಥೆ ಶುಕ್ರವಾರ ತಿಳಿಸಿದೆ.
ಭಂಡಾರಿಯ ಬ್ಯಾಂಕ್ ಖಾತೆಗಳಲ್ಲಿ ಭಾರೀ ಮೊತ್ತದ ಹಣವನ್ನು ಜಮೆ ಮಾಡಲಾಗಿದೆ. ಆ ಠೇವಣಿಗಳ ಕುರಿತು ತನಿಖೆಯ ವೇಳೆ ವಿವರಿಸಲು ಆತನಿಂದ ಸಾಧ್ಯವಾಗಿಲ್ಲ. ಈ ಹಣವನ್ನು ಭಂಡಾರಿಯ ಗುಂಪು ಕಂಪೆನಿಗಳ ಖಾತೆಗಳೊಳಗೆ ಆವರ್ತಿಸಲಾಗಿದೆ. ಅಂತಿಮವಾಗಿ ಅದನ್ನು ಆತನ ಹಾಗೂ ಆತನ ಕುಟುಂಬ ಸದಸ್ಯರ ಹೆಸರುಗಳಲ್ಲಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ. ಅದರಂತೆಯೇ ಹಣ ಚೆಲುವೆ ತಡೆ ಕಾಯ್ದೆಯನ್ವಯ ಎಸ್‌ಎಐಎಂಎಸ್‌ಗೆ ಸಮೀಪದ ರೂ. 9 ಕೋಟಿ ಮಾರುಕಟ್ಟೆ ಬೆಲೆಯ 15 ಎಕ್ರೆ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೆಂದು ಅದು ಹೇಳಿದೆ.
ಇದರಂತೆಯೇ ಸಾಗರ್ ಹಾಗೂ ಆತನ ಕುಟುಂಬಗಳು ನಗದಾಗಿ ಖರೀ ದಿಸಿರುವ ಅನೇಕ ಸ್ಥಿರ ಆಸ್ತಿಗಳನ್ನು ಗುರುತಿಸಲಾಗಿದೆ. ಆತನಿಂದಲೂ ತನ್ನ ಬ್ಯಾಂಕ್ ಖಾತೆಗಳಲ್ಲಿದ್ದ ಹಣದ ವಿವರ ನೀಡಲು ಸಾಧ್ಯವಾಗಿಲ್ಲ. ಅದರಿಂದಾಗಿ, ಸಾಗರ್‌ಗೆ ಸೇರಿದ, ಭಿವಂಡಿಯ 17 ಎಕ್ರೆ ಜಮೀನು ಹಾಗೂ ಇಂದೋರ್‌ನ ರೂ. 1.70 ಕೋಟಿ ಮಾರುಕಟ್ಟೆ ಬೆಲೆಯ ಮನೆಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗಿದೆಯೆಂದು ಇ.ಡಿ. ತಿಳಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News