×
Ad

ಮೋರ್ಗನ್‌ಗೇಟ್: ದಾರಿದೀಪ, ಇಂಟರ್‌ಲಾಕ್ ಕಾಮಗಾರಿ ಉದ್ಘಾಟನೆ

Update: 2016-04-03 14:08 IST

ಮಂಗಳೂರು, ಎ.3: ಮೋರ್ಗನ್‌ಗೇಟ್ ಕಾಸಿಯಾದಲ್ಲಿರುವ ಸಂತ ರೀತಾ ಚರ್ಚ್‌ನ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆಯ ವತಿಯಿಂದ ಸಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಹಾಗೂ ದಾರಿದೀಪದ ವ್ಯವಸ್ಥೆಯನ್ನು ಮಾಜಿ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್ ರವಿವಾರ ಉದ್ಘಾಟಿಸಿದರಜು.
ಚರ್ಚ್‌ನ ಪ್ರಧಾನ ಧರ್ಮಗರು ಅ.ವಂ. ಫಾ.ಹೆರಾಲ್ಡ್ ಮಸ್ಕರೇನ್ಹಸ್ ಆಶೀರ್ವದಿಸಿ ಮಾತನಾಡಿದರು.
ಇದೇ ಸಂದರ್ಭ ಚರ್ಚ್‌ನ ಸಹಾಯಕ ಗುರು ಫಾ.ಸುನೀಲ್ ಪಿಂಟೊ, ನಗರ ಪಾಲಿಕೆಯ ಸ್ಥಳೀಯ ಸದಸ್ಯೆ ರತಿಕಲಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News