ವಿಟ್ಲ : ಎ 13 ರಿಂದ 17ರವರೆಗೆ ಗುಡ್ಡೆಅಂಗಡಿ ಉರೂಸ್

Update: 2016-04-03 11:22 GMT

ವಿಟ್ಲ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ದರ್ಗಾ ಶರೀಫ್‌ನ 36ನೇ ವರ್ಷದ ಉರೂಸ್ ಕಾರ್ಯಕ್ರಮವು ಎ 13 ರಿಂದ 17ರವರೆಗೆ ನಡೆಯಲಿದೆ.

        ಎ 17 ರಂದು ಜುಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ, ಖಾಝಿ ಸ್ವೀಕಾರ ಸಮಾರಂಭ ಹಾಗೂ ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ನೂತನವಾಗಿ ನಿರ್ಮಾಣಗೊಂಡಿರುವ ಮಸೀದಿಯ ಮೇಲಂತಸ್ತನ್ನು ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿ ವಕ್ಫ್ ನೆರವೇರಿಸುವರು. ಇದೇ ವೇಳೆ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಜಮಾಅತ್ ಖಾಝಿಯಾಗಿ ಸ್ವೀಕರಿಸಲಾಗುವುದು.

        ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇರಳ-ತಾನೂರಿನ ಸಯ್ಯಿದ್ ಫಕ್ರುದ್ದೀನ್ ಹಸನಿ ಖಾದಿರಿ ದಾರಿಮಿ ತಂಙಳ್ ದುವಾಶಿರ್ವಚನಗೈಯಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸುವರು. ಸ್ಥಳೀಯ ಖತೀಬ್ ಮುಸ್ತಫಾ ಫೈಝಿ ಪಾತೂರು ಅಧ್ಯಕ್ಷತೆ ವಹಿಸುವರು. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ ಮುಖ್ಯ ಭಾಷಣಗೈಯುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಮಂಗಳೂರು ಶಾಸಕ ಬಿ.ಎ. ಮೊದಿನ್ ಬಾವ, ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮೆನ್ ಎಸ್.ಎಂ. ರಶೀದ್ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ.

        ಅದೇ ದಿನ ಸಂಜೆ ಎ.ಎ. ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ಇವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಪ್ರತೀ ದಿನ ಮಗ್ರಿಬ್ ಬಳಿಕ ಬಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ.

        ಈ ಪ್ರಯುಕ್ತ ನಡೆಯುವ ನಾಲ್ಕು ದಿನಗಳ ಮತ ಪ್ರವಚನ ಕಾರ್ಯಕ್ರಮದಲ್ಲಿ ಝುಬೈರ್ ದಾರಿಮಿ ಪೈಕಂ-ಕಾಸರಗೋಡು, ಸಲೀಂ ಫೈಝಿ ಇರ್ಫಾನಿ, ಅನ್ವರ್ ಅಲಿ ಹುದವಿ ಮಲಪ್ಪುರಂ-ಕೇರಳ, ಮೊದಿನ್ ಅರ್ಹರಿ ನೆಲ್ಲಿಕಟ್ಟೆ-ಕಾಸರಗೋಡು ಅವರು ಧಾರ್ಮಿಕ ಉಪನ್ಯಾಸಗೈಯುವರು ಎಂದು ಮಸೀದಿ ಅಧ್ಯಕ್ಷ ಹಾಜಿ ಅಹ್ಮದ್ ಫಕೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News