ವಿಶ್ವಕಪ್ ಜಯಿಸಿದ ವಿಂಡೀಸ್
Update: 2016-04-03 18:05 IST
ಕೋಲ್ಕತಾ, ಎ.3: ವೆಸ್ಟ್‌ಇಂಡೀಸ್ ತಂಡ ಐಸಿಸಿ ಮಹಿಳಾ ಟ್ವೆಂಟಿ -20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಇಂದು ಆಸ್ಟ್ರೇಲಿಯ ವಿರುದ್ಧ ಎಂಟು ವಿಕೆಟ್‌ಗಳ ಜಯ ಗಳಿಸುವ ಮೂಲಕ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 149 ರನ್‌ಗಳ ಸವಾಲನ್ನು ಪಡೆದ ವೆಸ್ಟ್ ಇಂಡೀಸ್ ತಂಡ ಇನ್ನೂ ಮೂರು ಎಸೆತಗಳನ್ನು ಬಾಕಿ ಉಳಿಸಿ, ಗೆಲುವಿಗೆ ಅಗತ್ಯದ ರನ್ ಸೇರಿಸಿತು. ವಿಂಡೀಸ್ ತಂಡದ ನಾಯಕಿ ಸ್ಟೆಪಾನಿ ಟೇಲರ್(59) ಮತ್ತು ಹಾಯ್ಲೆ ಮ್ಯಾಥ್ಯೂಸ್ 59ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.