×
Ad

ಸುರತ್ಕಲ್ : ರಾಜಕೀಯದೊಂದಿಗೆ ಧರ್ಮ ಸೇರಿಕೊಂಡರೆ ಸರ್ವನಾಶ ಖಂಡಿತ - ಎಸ್.ಆರ್. ಹಿರೇಮಠ್

Update: 2016-04-03 20:24 IST


 “ ಸುರತ್ಕಲ್, ಎ.3: ರಾಜಕೀಯದೊಂದಿಗೆ ಧರ್ಮ ಸೇರಿಕೊಂಡರೆ ಸರ್ವನಾಶ ಕಂಡಿತ. ಹೆತ್ತವರು ಮಾಡುವ ಧರ್ಮದ ಪಾಠ ಮತ್ಯಾರೋ ಮಾಡುವಂತಾಗಿದೆ ಇದು ದೇಶಕ್ಕೆ ಮಾರಕ. ಭಾರತ ರಾಜಕೀಯವಾಗಿ ಸ್ವರಾಜ್ಯ ಎನಿಸಿಕೊಂಡಿದೆ ಹೊರತು ಆರ್ಥಿಕ ಸಾಮಾಜಿಕವಾಗಿ ಸ್ವರಾಜ್ಯಗೊಂಡಿಲ್ಲ ಎಂದು ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು. ಅವರು ಕೃಷಿಭೂಮಿ ಸಂರಕ್ಷಣಾ ಸಮಿತಿ ಕುತ್ತೇತ್ತೂರಿನಲ್ಲಿ ಆಯೋಜಿಸಿದ್ದ ಎಂ.ಆರ್.ಪಿ.ಎಲ್‌ನ ಬೃಹತ್ ವಿಸ್ತರಣಾ ಯೋಜನೆಯ ಹಿನ್ನೆಲೆ ರೂಪಿಸಲಾಗಿದ್ದ ಬೃಹತ್ ಯೋಜನೆಗಳು- ಭೃಷ್ಟಾಚಾರ- ಜನವಿರೋಧ”  ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವ ಎಲ್ಲರಿಗೂ ಸಮಾನತೆಯನ್ನು ಕಲ್ಪಸಿದೆಯಾದರೂ ಇಲ್ಲಿನ ಧರ್ಮ ಪ್ರೇರಿತ ರಾಜಕೀಯ ಕೃಷಿಕರನ್ನು ಹೊಸಕಿ ಹಾಕಲು ಹುನ್ನಾರ ನಡೆಸುತ್ತಿದೆ. ಸ್ವಾತಂತ್ಯ ಪೂರ್ವದಿಂದಲೂ ಬಂದಿರುವ ಎಲ್ಲಾ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸ್ವಾರ್ಥ ಸಾಧನೆಯನ್ನಷ್ಟೇ ಮಾಡುತ್ತ ಬಂದಿದೆ. ಅಭಿವೃದ್ಧಿಯ ಮಾತುಗಳನ್ನಾಡುತ್ತಿರುವ ಕಾರ್ಪೊರೇಟ್ ಕಂಪೆನಿಗಳಿಗೆ ನೈತಿಕತೆಯೇ ಇಲ್ಲ. ಅವುಗಳು ಈ ವರೆಗೂ ಬಡಪಾಯಿ ರೈತರಿಗೆ ಕವಡೆ ಕಾಸಿನ ಬೆಲೆ ನೀಡಿಲ್ಲ ಎಂದ ಹರೇಮಠ್, ಸಹಕಾರಿ ಕ್ಷೇತ್ರದ ಬುಡ ಗಟ್ಟಿಗೊಳಿಸಿದರೆ ರೈತರು ಸಧೃಡರಾಗಿ ಕಂಪೆನಿಗಲನ್ನು ಎದುರಿಸಲು ಸಶಕ್ತರಾಗಲಿದ್ದಾಋಎ ಎಂದರು.
 ನೈಸರ್ಗಿಕ ದತ್ತ ವಸ್ತುಗಳನ್ನು ಭಟ್ಟಭದ್ರ ಹಿತಾಸಕ್ತಿಗಳು ಹಾಳುಮಾಡುತ್ತಿವೆ ಇದನ್ನು ಕಂಡು ಸುಮ್ಮನಿರುವ ಸಂಗತಿ ಇಲ್ಲ. ಪೊಲೀಸರ ಅಸ್ತ್ರಕಿಂತಲೂ ಹೋರಾಟಗಾರರು ವಿನಯದಿಂದ ತಮ್ಮ ಪ್ರತಿಭಟನೆಯನ್ನು ನಡೆಸಬೇಕು. ಜನ ಶಕ್ತಿ ಹೋರಾಟದ ಇಂಜಿನ್ ಆಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಚೆರ್ರಿ ಪಾಯಸ್, ಪ್ರಜಾಪ್ರಭುತ್ವ ದೇಶದಲ್ಲಿ ಬಡವರು ರೈತರಿಗೆ ನ್ಯಾಯ ಮರೀಚಿಕೆಯಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಜನರು ಮತ್ತು ಅವರ ಸಂಸ್ಕೃತಿಗೆ ಕೊಡಲಿ ಏಟುಗಳು ನೀಡಲಾಗುತ್ತಿದೆ. ದೇಶದಲ್ಲಿ ಭಯಬೀತಿಯ ವಾತಾವರಣ ಇದ್ದು, ರೈತರು ಬಡವರನ್ನು ಹೆದರಿಸಿ ಬೆದರಿಸಿ ಭೂಮಿಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ಸಮೀತಿಯ ಅಧ್ಯಕ್ಷ ಮಧುಕರ ಅಮೀನ್, ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಕೃಷಿಕ ಲಾರೆನ್ಸ್ ಡಿಕುನ್ಹಾ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಕೈಗೊಂಡ ನಿರ್ಣಯಗಳು,

1 ಕೃಷಿ ಭೂಮಿಯಲ್ಲಿ ಕೃಷಿಯೇತರ ಕೈಗಾರಿಕೆಗೆ ನೀಡಬಾರದು.
2 ಭೂ ಬಳಕೆಯ ನಿಯಮ ಜಾರಿಯಾಗಬೇಕು.
3 ಹುಲುವವನೇ ಹೊದೊಡೆಯ ನೀತಿ ಮತ್ತೆ ಗಟ್ಟಿಯಾಗಿ ಪುನಸ್ಥಾಪಿತ ಗೊಳಿಸಬೇಕು.
4 ಸಹಕಾರಿ ಕ್ಷೇತ್ರಗಳನ್ನು ಬಲವರ್ಧನೆ ಗೊಳಿಸುವುದು.


ಇದೇ ವೇಳೆ ಗ್ರಾಮಸ್ಥರಿಗೆ ಹಿರೇಮಠ್‌ರೊಂದಿಗೆ ಪ್ರಶ್ನೋತ್ತರ ಸಮಯವನ್ನು ಕಲ್ಪಿಸಲಾಗಿತ್ತು. ಹಲವರು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು ಮತ್ತು ಹೋರಾಟದ ರೂಪುರೇಶೆಗಳನ್ನು ತಯಾರಿಸುವ ಬಗ್ಗೆ ಹಿರೇಮಠ್ ಗ್ರಾಮಸ್ಥರಿಗೆ ತಿಳಿಹೇಳಿದರು.

ಎಂಆರ್‌ಪಿಎಲ್ ಮತ್ತು ಎಸ್‌ಇಝೆಡ್ ಮಂಗಳೂರು ತಾಲೀಕಿನಿ ತೋಕೂರು, ಬೈಕಂಪಾಡಿ, ತಣ್ಣೀರು ಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಮತ್ತು ದೆಲಮತಬೆಟ್ಟು ಪರಿಸರದಲ್ಲಿ ಕೃಷಿಕರಿಂದ ವಶಪಟಿಸಿ ಕೊಂಡಿರುವ ಸಾವಿರಾರು ಎಕ್ಕರೆ ಭೂಮಿಯಲ್ಲಿ ಬಳಕೆಯಾಗಿರುವ ಭೂಮಿ, ಬಳಕೆಯಾಗದಿರುವ ಭೂಮಿಯ ಲೆಕ್ಕಾಚಾರಗಳು ಸೇರಿದಂತೆ ಹಲವು ಪ್ರಶ್ನೆಗಳನ್ನು ಆರ್‌ಟಿಐಯಡಿ ಎಲ್ಲಾ ಗ್ರಾಮಸ್ಥರು ಸೇರಿ ಸರಕಾರದಿಂದ ಪಡೆಯುವ ಬಗ್ಗೆ ಪ್ರತಿಜ್ಞೆ ಮಾಡಲಾಯಿತು.

ಸಭೆ ಆರಂಭಕ್ಕೂ ಮೊದಲು ಎಂಆರ್‌ಪಿಎಲ್ ಕಂಪೆನಿಯ ಮಾಹಿತಿದಾರರಿಬ್ಬರನ್ನು ಸ್ಥಳೀಯರು ತರಾಟೆಗೆ ತೆಗೆದು ಕೊಂಡ ಘಟನೆ ನಡೆಯಿತು. ಉತ್ತರ ಕನ್ನಡ ಮೂಲದ ಸತೀಶ್ ಮತ್ತು ಚೇತನ್ ಎಂಬಿಬ್ಬರನ್ನು ಸ್ಥಳೀಯರು ತರಾಟೆಗೆ ತೆಗೆದು ಕೊಂಡು ಹಲ್ಲೆ ಮುಂದಾದರು. ಅಲ್ಲದೆ, ಕಂಪೆನಿಯ ಅಧಿಕಾರಿಗಳಿಗೆ ಫೋನಾಯಿಸಿ ಸ್ಥಳಕ್ಕೆ ಬರುವಂತೆ ಸ್ಥಳೀಯರು ತಿಲಿಸಿದರದರೂ ಮರು ಉತ್ತರ ಬರದಿದ್ದ ಕಾರಣ ಯುವಕರಿಬ್ಬರ ಮೊಬೈಲ್ ಫೋನ್‌ಗಳನ್ನು ಸ್ಥಳೀಯರು ವಶಕ್ಕೆ ಪಡೆದು ದಿಗ್ಭಂಧನ ವಿಧಿಸಿ ಸಭೆಯಲ್ಲಿ ಭಾಗವಹಿಸುವಂತೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News