ರಿಯಾದ್: ಟಿಸಿಎಸ್‌ಗೆ ಮೋದಿ ಭೇಟಿ
ರಿಯಾದ್,ಎ.3: ಸೌದಿ ಆರೇಬಿಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರವಿವಾರ ರಿಯಾದ್‌ನಲ್ಲಿ ಮಾಹಿತಿತಂತ್ರಜ್ಞಾನ ಕ್ಷೇತ್ರದ ಮಹಿಳಾ ಉದ್ಯೋಗಿಗಳ ಜೊತೆ ಮಾತುಕತೆ ನಡೆಸಿದರು. ನಗರದ ಹೃದಯಭಾಗದಲ್ಲಿರುವ, ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತರಬೇತಿ ಕೇಂದ್ರದಲ್ಲಿ ಮಹಿಳಾ ಐಟಿ ಉದ್ಯೋಗಿಗಳನ್ನುದ್ದೇಶಿಸಿ ಭಾಷಣ ಮಾಡಿದ ಅವರು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.
‘‘ ಸೌದಿ ಆರೇಬಿಯದ ಭವ್ಯತೆಯನ್ನು ಪ್ರತಿನಿಧಿಸುವ ಐಟಿ ವೃತ್ತಿಪರನ್ನು ಇಂದು ನಾನು ಭೇಟಿಯಾದುದು, ಇಂದಿನ ಮಹತ್ವದ ಸುದ್ದಿಯೆಂದು ಪರಿಗಣಿಸಬಹುದಾಗಿದೆ’’ ಎಂದು ಅವರು ಹೇಳಿದರು. ಟಿಸಿಎಸ್‌ನಲ್ಲಿ ಸುಮಾರು 40 ನಿಮಿಷಗಳನ್ನು ಕಳೆದ ಅವರು, ಅಲ್ಲಿನ ಉದ್ಯೋಗಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ‘‘ನೀವೆಲ್ಲರೂ ಭಾರತಕ್ಕೆ ಭೇಟಿ ನೀಡಬೇಕು. ನಿಮಗೆ ಅಲ್ಲಿ ಅತ್ಯಂತ ಹಾರ್ಧಿಕ ಸ್ವಾಗತ ದೊರೆಯಲಿದೆ. ಇಲ್ಲಿನ ನಾವು ಕಾಣುತ್ತಿರುವ ವಾತಾವರಣವು ಜಗತ್ತಿಗೆ ಅತ್ಯಂತ ಪ್ರಬಲವಾದ ಸಂದೇಶವನ್ನು ನೀಡಲು ಶಕ್ತವಾಗಿದೆ’’ ಎಂದು ಮೋದಿ ಹೇಳಿದರು. ಟಿಸಿಎಸ್ ಸೆಂಟರ್‌ನಲ್ಲಿ ಸುಮಾರು 1 ಸಾವಿರ ಮಹಿಳೆಯರು ಬಿಪಿಓ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಅವರಲ್ಲಿ ಶೇ.85ರಷ್ಟು ಮಹಿಳೆಯರು ಸೌದಿ ಪ್ರಜೆಗಳಾಗಿದ್ದಾರೆ.
ಸೌದಿ ಆರೇಬಿಯದಲ್ಲಿ ಯುವಕ, ಯುವತಿಯರಿಗಾಗಿ ಐಟಿ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದಕ್ಕಾಗಿ ಅವರು ಟಿಸಿಎಸ್‌ನ್ನು ಅಭಿನಂದಿಸಿದರು. ಇಲ್ಲಿ ತರಬೇತಿ ಪಡೆದ ವರು ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆಗೈದು, ಇಡೀ ಜಗತ್ತನ್ನೇ ಸಶಕ್ತಗೊಳಿಸಲಿ ಎಂದವರು ಹಾರೈಸಿದರು.
ಟಿಸಿಎಸ್ 2013ರಲ್ಲಿ ಸೌದಿ ಆರೇಬಿಯದ ರಿಯಾದ್‌ನಲ್ಲಿ ಪ್ರಪ್ರಥಮ ಮಹಿಳೆಯರೇ ನಿರ್ವಹಿಸು ಉದ್ಯಮ ಪ್ರಕ್ರಿಯೆ ಸೇವಾ (ಬಿಪಿಎಸ್) ಕೇಂದ್ರವನ್ನು ಸ್ಥಾಪಿಸಿತ್ತು.