×
Ad

ಕಾರ್ಯಯೋಜನೆ ರೂಪಿಸಲು ಕೇಂದ್ರ ಸೂಚನೆ

Update: 2016-04-03 23:18 IST

ಹೊಸದಿಲ್ಲಿ, ಎ.3: ಪ್ರಧಾನಿ ನರೇಂದ್ರ ಮೋದಿ ಯವರ ‘ಸ್ವಚ್ಛಭಾರತ’ ಅಭಿಯಾನ ವನ್ನು ಒಂದು ಹೆಜ್ಜೆ ಮುಂದ ಕ್ಕೊಯ್ಯಲು ಹಾಗೂ 2019ರ ಅ.2ರ ಒಳಗೆ ಸಂಪೂರ್ಣ ನೈರ್ಮಲ್ಯವನ್ನು ಸಾಧಿಸಲು, ಈ ಕಾರ್ಯಕ್ರಮಕ್ಕೆ ತಮ್ಮ ಕೊಡುಗೆಯನ್ನು ಬಿಂಬಿಸಲು ಪ್ರತಿ ವರ್ಷ 15 ದಿನಗಳ ಕಾರ್ಯ ಯೋಜನೆಯೊಂದನ್ನು ಅನುಷ್ಠಾನ ಗೊಳಿಸುವಂತೆ ಕೇಂದ್ರ ಸರಕಾರವು ತನ್ನೆಲ್ಲ ಸಚಿವರಿಗೆ ಸೂಚಿಸಿದೆ.

ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಇತ್ತೀಚೆಗೆ ಕೇಂದ್ರ ಸರಕಾರದ ಎಲ್ಲ ಸಚಿವಾಲಯಗಳಿಗೆ ಪತ್ರ ಬರೆದು, ಗಮನಾರ್ಹವಾಗಿ ಹೆಚ್ಚಿಸಬೇಕಾಗಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳ ‘ವ್ಯಾಪ್ತಿ, ತೀವ್ರತೆ ಹಾಗೂ ಗೋಚರ’ ಗಳ ಕುರಿತು ತಿಳಿಸಿದ್ದಾರೆ.
ಆದುದರಿಂದ ಸ್ಚಚ್ಛ ಭಾರತ ಅಭಿಯಾನಕ್ಕೆ ಸಚಿವಾಲಯದ ಕೊಡುಗೆಯ ಮೇಲೆ ಬೆಳಕು ಚೆಲ್ಲಲು ಪ್ರತಿ ವರ್ಷ ಕನಿಷ್ಠ 15 ದಿನಗಳ ಕಾರ್ಯ ಯೋಜನೆಯನ್ನು ಪ್ರತಿ ಸಚಿವಾಲಯವೂ ರಚಿಸಿ ಜಾರಿಗೊಳಿಸುವುದು ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಸಾಕಷ್ಟು ಕೆಲಸವನ್ನು ಮಾಡುವುದು ಅಪೇಕ್ಷಣೀಯವೆಂದು ಸಿನ್ಹಾ ಹೇಳಿದ್ದಾರೆ.


ಕಾರ್ಯ ಯೋಜನೆಯು ಸಚಿವಾಲಯದ ಹೊಣೆಗಾರಿಕೆಯ ವಲಯಗಳನ್ನು ಆಧರಿಸಿರಬಹುದು ಹಾಗೂ ಹೊಸದಾದ ಪದ್ಧತಿಗಳು, ಮಾಧ್ಯಮ ಪ್ರಚಾರ, ಕಾರ್ಯಾಗಾರಗಳು, ಪ್ರಶಸ್ತಿ ಸಮಾರಂಭಗಳು ಇತ್ಯಾದಿ ಅವುಗಳಲ್ಲಿ ಸೇರಿರಬಹುದೆಂದು ಅವರು ತಿಳಿಸಿದ್ದಾರೆ. 2016ರ ಎ.1ರಿಂದ ಸ್ವಚ್ಛತಾ ಪಾಕ್ಷಿಕದ ಕ್ಯಾಲೆಂಡರ್ ಸಿದ್ಧವಾಗಿದ್ದು, ಈ ಅಭಿಯಾನಗಳ ವೇಳೆ ಸಮುದಾಯ ಅಥವಾ ನಾಗರಿಕರನ್ನು ತಲುಪಲು ಆದ್ಯತೆ ನೀಡಬೇಕು. ಸಾಮೂಹಿಕ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳನ್ನುಪಯೋಗಿಸಿ, ಸಚಿವಾಲಯಗಳು ಅಥವಾ ಇಲಾಖೆಗಳು ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು ಅಗತ್ಯವೆಂದು ಸಿನ್ಹಾ ಪತ್ರದಲ್ಲಿ ಹೇಳಿದ್ದಾರೆ.
 ಆದಾಗ್ಯೂ, ಸಾರ್ವಜನಿಕ ಸೌಲಭ್ಯ ಗಳನ್ನು ನಿಭಾಯಿಸುತ್ತಿರುವ ಹಾಗೂ ಅವುಗಳೊಂದಿಗೆ ಸಂಬಂಧ ಹೊಂದಿರುವ ಸಚಿವಾಲಯಗಳು ಹಾಗೂ ಇಲಾಖೆಗಳು ಈ ಅಭಿಯಾನಗಳನ್ನು 15 ದಿನಗಳಿಗಿಂತಲೂ ಹೆಚ್ಚು ಕಾಲ ಮುಂದು ವರಿಸಬಹುದೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News