×
Ad

ಉಪ್ಪಿನಂಗಡಿ: ರಕ್ತದಾನ ಶಿಬಿರ

Update: 2016-04-03 23:24 IST

ಉಪ್ಪಿನಂಗಡಿ, ಎ.3: ಬ್ಲಡ್ ಡೋನರ್ಸ್ ಮಂಗಳೂರು, ಪೆರಿಯಡ್ಕದ ಮನ್ಬಹುರ್ರಹ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಐಎಂಡಬ್ಲುಎ ವತಿಯಿಂದ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಇತ್ತೀಚೆಗೆ ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನಡೆಯಿತು.

ಬಂಟ್ವಾಳ ಜುಮಾ ಮಸೀದಿಯ ಖತೀಬ್ ಅನ್ಸಾರ್ ಬುರ್ಹಾನಿ ಫೈಝಿ ದುಆಗೈದರು. ಮಜೀದ್ ಸಖಾಫಿ ಉದ್ಘಾಟನಾ ಭಾಷಣ ಮಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಾಲಸುಬ್ರಹ್ಮಣ್ಯ ಪಿ.ಎಸ್, ಮಂಗಳೂರು ಬ್ಲಡ್ ಡೋನರ್ಸ್ ಉಪಾಧ್ಯಕ್ಷ ನಿಝಾಮುದ್ದೀನ್ ಉಪ್ಪಿನಂಗಡಿ ಮಾತನಾಡಿದರು.

  ವೇದಿಕೆಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಉರ್ಣಿ ಮಂಜೇಶ್ವರ, ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್, ಐಎಂಡಬ್ಲುಎ ಅಧ್ಯಕ್ಷರಾದ ಮುಸ್ತಾಫ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 67 ಮಂದಿ ರಕ್ತದಾನ ಮಾಡಿದರು. ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು. ನಿಝಾಮುದ್ದೀನ್ ಉಪ್ಪಿನಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News