×
Ad

ಕಿನ್ಯ: ಅಲ್-ಬುಖಾರಿ ಮಸೀದಿ ಉದ್ಘಾಟನೆ

Update: 2016-04-03 23:37 IST

ಉಳ್ಳಾಲ, ಎ.3: ಇಸ್ಲಾಮಿನ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಮಸೀದಿಗಳ ಅನಿವಾರ್ಯತೆ ಬಹಳಷ್ಟಿದೆ. ಮಸೀದಿ ಅಲ್ಲಾಹನ ಭವನವಾಗಿದ್ದು, ಅದಕ್ಕೆ ಸಲ್ಲಬೇಕಾದ ಗೌರವಗಳನ್ನು ನಾವು ನೀಡ ಬೇಕಾಗಿದೆ. ಧಾರ್ಮಿಕತೆಯ ಬೆಳವಣಿಗೆ ಮಸೀದಿಗಳು ಅಭಿವೃದ್ಧಿಗೊಂಡರೆ ಮಾತ್ರ ಸಾಧ್ಯ ಎಂದು ಎ.ಪಿ. ಅಬೂಬಕರ್ ಮುಸ್ಲಿ ಯಾರ್ ಹೇಳಿದರು.

  ಹುಸೈನಿಯಾ ಇಸ್ಲಾಮಿಕ್ ಸೆಂಟರ್ ಕಿನ್ಯ ಬದ್ರಿಯಾ ನಗರ ವಿದ್ಯಾ ಸಂಸ್ಥೆಯು ನಿರ್ಮಿಸಿದ ಅಲ್-ಬುಖಾರಿ ಮಸೀದಿಯನ್ನು ಶನಿವಾರ ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಸೋಟ್ ಮಲ್‌ಹರ್ ವಿದ್ಯಾಸಂಸ್ಥೆಯ ಪ್ರ.ಕಾರ್ಯದರ್ಶಿ ಜಲಾಲುದ್ದೀನ್ ತಂಙಳ್ ವಹಿಸಿದ್ದರು. ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ತಾಜುಶ್ಯರೀಅ ಆಲಿಕುಂಞಿ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಸೀದಿ ನಿರ್ಮಾಣಕ್ಕೆ ನಿವೇಶನ ನೀಡಿದ ಅಬ್ಬಾಸ್ ಹಾಜಿ ಕಿನ್ಯ ಮತ್ತು ಮಸೀದಿ ನಿರ್ಮಾಣ ಕಾರ್ಯದಲ್ಲಿ ಉತ್ತಮ ಸೇವೆಗೈದ ಇಸ್ಮಾಯಿಲ್ ಸಅದಿ ಕಿನ್ಯರವರನ್ನು ಸನ್ಮಾನಿಸಲಾಯಿತು.

  ವೇದಿಕೆಯಲ್ಲಿ ಪಿಎಂ ಅಬ್ಬಾಸ್ ಮುಸ್ಲಿ ಯಾರ್ ಅಲ್ ಮದೀನ, ಮಾಣಿ ದಾರುಲ್ ಇರ್ಷಾದ್‌ನ ಅಧ್ಯಕ್ಷ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್‌ವೈಎಸ್ ಮೀಂಪ್ರಿ ಅಧ್ಯಕ್ಷ ಸಯ್ಯಿದ್ ಅಲವಿ ತಂಙಳ್ ಕಿನ್ಯ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆಸಿ.ರೋಡ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ, ಪ್ರ.ಕಾರ್ಯದರ್ಶಿ ಎಂ.ಬಿ.ಎಂ. ಸ್ವಾದಿಕ್ ಮಾಸ್ಟರ್, ಯಾಕುಬ್ ಸಅದಿ, ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್, ಕರ್ನಾಟಕ ಎಸ್‌ಇಡಿಸಿ ಅಧ್ಯಕ್ಷ ಕೆ.ಕೆ. ಮೊಹಿಯುದ್ದೀನ್ ಕಾಮಿಲ್ ಸಖಾಫಿ ಸುರಿಬೈಲ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಎಂ.ಎ. ಸಿದ್ದೀಕ್ ಸಖಾಫಿ, ವಕ್ಫ್ ಬೋರ್ಡ್‌ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಕೆಎಂಜೆಸಿ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಕೆಸಿಎಫ್ ಐಎನ್‌ಸಿ ಸಮಿತಿಯ ಪ್ರ.ಕಾರ್ಯದರ್ಶಿ ಹಾಜಿ ಶೇಖ್ ಬಾವ, ಏಷ್ಯನ್ ಬಾವಾ ಹಾಜಿ ದೇರಳಕಟ್ಟೆ, ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೊಂಟುಗೋಳಿ, ಕುರಿಯ ಎಸ್‌ವೈಎಸ್ ಅಧ್ಯಕ್ಷ ಅಶ್ರಫ್ ಸಖಾಫಿ ಕಿನ್ಯ, ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಕಿನ್ಯ, ಉಪಾಧ್ಯಕ್ಷ ಕೆ.ಎಸ್. ಅಹ್ಮದ್ ಕುಂಞಿ ಹಾಜಿ, ಕಾರ್ಯದರ್ಶಿ ಅಬೂಸ್ವಾಲೀಹ್ ಕುರಿಯಕ್ಕಾರ್, ಕೆಎಂಜೆಸಿ ದ.ಕ. ಜಿಲ್ಲಾ ಉಪಾಧ್ಯಕ್ಷ ಆಲಿಕುಂಞಿ ಪಾರೆ, ಎಸ್‌ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಪುತ್ತುಬಾವ ಹಾಜಿ ದೇರಳಕಟ್ಟೆ, ಅಂಗರಗುಂಡಿ ಜುಮ್ಮಾ ಮಸೀದಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿ ಕೆಸಿಎಫ್ ಅಬೂದಾಬಿ ಹಸೈನಾರ್ ಅಮಾನಿ, ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ, ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್.ಎಸ್ ಉಮರಬ್ಬ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯರಾದ ಕೆ.ಪಿ ಅಶ್ರಫ್ ಕಲ್ಕಟ್ಟ, ಅಬ್ದುಲ್ ಖಾದರ್ ಕಲ್ಕಟ್ಟ, ಜಿ.ಪಂ. ಮಾಜಿ ಅಧ್ಯಕ್ಷ ಎನ್.ಎಸ್. ಕರೀಂ, ಇಲ್ಯಾಸ್ ಜುಮಾ ಮಸೀದಿ ಉಪಾಧ್ಯಕ್ಷ ಮುಹಮ್ಮದ್ ಹಾಜಿ ಖಂಡಿಕ, ಎಸ್‌ವೈಎಸ್ ಕಲ್ಕಟ್ಟ ಅಧ್ಯಕ್ಷ ಮೋನು ಮೊದಲಾದವರು ಉಪಸ್ಥಿತರಿದ್ದರು. ಹುಸೈನಿಯಾ ಇಸ್ಲಾಮಿಕ್ ಸೆಂಟರ್‌ನ ಉಪಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಕುತುಬಿನಗರ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ವಿ.ಎ ಮುಹಮ್ಮದ್ ಮುಸ್ಲಿಯಾರ್ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News