×
Ad

ಆನ್‌ಲೈನ್ ಮಾರುಕಟ್ಟೆ ರೈತರ ಆತ್ಮಸ್ಥೆ ರ್ಯಕ್ಕೆ ಪೂರಕ

Update: 2016-04-03 23:41 IST

ಉಡುಪಿ, ಎ.3: ಕರ್ನಾಟಕ ಸರಕಾರ ರಾಜ್ಯಾದ್ಯಂತ ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಆನ್‌ಲೈನ್ ಮಾರಾಟ ವೇದಿಕೆ ಮೂಲಕ ಕೃಷಿ ಮಾರುಕಟ್ಟೆಗಳಲ್ಲಿ ಏಕೀಕೃತ ಮಾರಾಟ ವ್ಯವಸ್ಥೆ ರೂಪಿಸುತ್ತಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಆನ್‌ಲೈನ್ ವ್ಯವಸ್ಥೆ ಮೂಲಕ ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ ಎಂದು ಉಡುಪಿ ಎಪಿಎಂಸಿ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಹೇಳಿದ್ದಾರೆ.

ಉಪ್ಪೂರು ಗ್ರಾಪಂನಲ್ಲಿ ಗುರುವಾರ ನಡೆದ ಆನ್‌ಲೈನ್ ಮಾರುಕಟ್ಟೆ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇಂದು ರೈತ ತಾನು ಬೆಳೆಸಿದ ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದೆ ಆತ್ಮಸ್ಥೈರ್ಯ ಕಳೆದು ಕೊಂಡಿದ್ದಾನೆ. ಆನ್‌ಲೈನ್ ಮಾರಾಟ ವೇದಿಕೆ ಮೂಲಕ ಕೃಷಿ ಉತ್ಪನ್ನಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡುವ ಮೂಲಕ ಆತ್ಮಸ್ಥೈರ್ಯ ಪಡೆಯುವ ಪೂರಕ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಿದೆ ಎಂದು ಹೇಳಿದರು. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಲಭ್ಯವಾ ಗುವುದರಿಂದ ಉಗ್ರಾಣ ಆಧಾರಿತ ಮಾರುಕಟ್ಟೆ ವ್ಯವಸ್ಥೆ, ಹರಾಜು ಮಾರುಕಟ್ಟೆ ವ್ಯವಸ್ಥೆ, ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಮೂಲಕ ರೈತರು ಸ್ವಾವಲಂಬಿ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 ಮಾಹಿತಿ ಕಾರ್ಯಾಗಾರದಲ್ಲಿ ಉಪ್ಪೂರು ಗ್ರಾಪಂ ಅಧ್ಯಕ್ಷೆ ಆರತಿ ಪೂಜಾರಿ, ಉಪಾಧ್ಯಕ್ಷೆ ಪ್ರೀತಿ ಡಿಸಿಲ್ವಾ, ಗ್ರಾಪಂ ಸದಸ್ಯರಾದ ಗಣೇಶ್ ಪೂಜಾರಿ, ಪ್ರವೀಣ್ ಕುಮಾರ್, ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ, ರಾಘವೇಂದ್ರ ಉಪ್ಪೂರು, ಯು. ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News