ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

Update: 2016-04-03 18:12 GMT

ಮಂಗಳೂರು, ಎ.3: ಶಿಕ್ಷಕನ ಯಶಸ್ಸು ಆತ ಕಾಣುವ ಕನಸುಗಳನ್ನು ಕಾರ್ಯರೂಪಕ್ಕಿಳಿಸುವ ನಿರಂತರ ಪ್ರಯತ್ನ ಹಾಗೂ ಕಳಕಳಿಯನ್ನು ಅವಲಂಬಿಸಿದೆ. ಯಶಸ್ವಿ ಜೀವನವನ್ನು ರೂಪಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲ ಯದ ಪ್ರಸ್ತುತ ಸಾಲಿನ ವಿದ್ಯಾರ್ಥಿ ಪರಿಷತ್ತನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು. ಶೇ.100 ಫಲಿತಾಂಶದ ಗಳಿಸಿರುವ ಸಂಸ್ಥೆಯನ್ನು ಅಭಿನಂದಿಸಿದ ಅವರು ಅತ್ಯಧಿಕ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿ ಶಿಕ್ಷಕರಾದ ರಶ್ಮೀ (845), ರೇಷ್ಮಾ(820), ಶೃತಿ ಎ.(811) ಶೃತಿ ಎಚ್. (810) ಆರಿಫಾ (809)ರನ್ನು ಪುರಸ್ಕರಿಸಿದರು.

ಈ ವರ್ಷದ ವಿದ್ಯಾರ್ಥಿನಿ, ಬಿ.ಎ.ಯಲ್ಲಿ ರ್ಯಾಂಕ್ ಗಳಿಸಿ ರುವ ಪ್ರಜ್ಞಾರನ್ನು ಇದೇ ಸಂದರ್ಭ ಸನ್ಮಾನಿಸ ಲಾಯಿತು. ಮಂಗಳೂರು ವಿವಿ ಶಿಕ್ಷಣ ನಿಕಾಯದ ಡೀನ್ ಡಾ.ಕಿಶೋರ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವರ್ಷ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ಪ್ರಾಚಾರ್ಯ ಮೋಸೆಸ್ ಜಯಶೇಖರ್ ಪ್ರತಿಜ್ಞಾ ವಿಧಿ ಬೋಧಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News