ಸೈಕಲ್ ಸವಾರಿ ಬಗ್ಗೆ ಜನಜಾಗೃತಿ: ಎಸ್ಪಿ ನೇತೃತ್ವದಲ್ಲಿ ಶಿರೂರು-ಹೆಜಮಾಡಿ ರ್ಯಾಲಿ

Update: 2016-04-03 18:14 GMT

ಉಡುಪಿ, ಎ.3: ಸೈಕಲ್ ಸವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಪೊಲೀಸ್ ಇಲಾಖೆ ಹಾಗೂ ಉಡುಪಿ ಸೈಕ್ಲಿಂಗ್ ಕ್ಲಬ್‌ಗಳ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಉತ್ತರದ ಗಡಿಭಾಗ ಶಿರೂರಿ ನಿಂದ ದಕ್ಷಿಣದ ಗಡಿಭಾಗ ಹೆಜಮಾಡಿ ಯವರಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೈಕ್ಲಿಂಗ್ ರ್ಯಾಲಿಯನ್ನು ರವಿವಾರ ಹಮ್ಮಿ ಕೊಳ್ಳಲಾಗಿತ್ತು.
 
ಬೆಳಗ್ಗೆ 6:30ರ ಸುಮಾರಿಗೆ ಶಿರೂರು ಚೆಕ್‌ಪೋಸ್ಟ್‌ನಲ್ಲಿ ರ್ಯಾಲಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಹೊರಟ ಜಾಥಾವು ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಪಡುಬಿದ್ರೆ ಮಾರ್ಗ ವಾಗಿ ಹೆಜಮಾಡಿ ಚೆಕ್‌ಫೋಸ್ಟ್‌ಗೆ ಆಗಮಿಸಿತು. ಒಟ್ಟು 111 ಕಿ.ಮೀ. ದೂರದ ಈ ರ್ಯಾಲಿಯು ಅಪರಾಹ್ನ 2:30ರ ಸುಮಾರಿಗೆ ಗುರಿ ತಲುಪಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ನೇತೃತ್ವದಲ್ಲಿ 28 ಮಂದಿಯ ಈ ತಂಡದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಡಿಸಿಐಬಿ ಇನ್ಸ್ ಪೆಕ್ಟರ್ ಜೈಶಂಕರ್ ಟಿ.ಆರ್., ಕಾಪು ವೃತ್ತ ನಿರೀಕ್ಷಕ ಸುನೀಲ್ ನಾಯಕ್, ಹಿರಿಯಡ್ಕ ಎಸ್ಸೈ ರಫೀಕ್ ಸಹಿತ 16 ಪೊಲೀಸರು, ಉಳಿದಂತೆ ಮಣಿಪಾಲ ಎಂಐಟಿಯ ಪ್ರೊಫೆಸರ್‌ಗಳಾದ ಶಮೀಮ್, ಗಣೇಶ್, ಉಡುಪಿಯ ಸೈಂಟ್ ಅಂತೋನಿ ಸೈಕಲ್ ವರ್ಕ್‌ನ ಮಾಲಕ ರೇಗನ್, ಯುಪಿಸಿಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ವಿದ್ಯಾರ್ಥಿಗಳು, ಉದ್ಯಮಿಗಳಿದ್ದರು. ಈ ಜಾಥಾಕ್ಕಾಗಿ ಅಂಥೋನಿ ಸೈಕಲ್ ವರ್ಕ್‌ನಿಂದ 16 ಸೈಕಲ್ ಗಳನ್ನು ಒದಗಿಸಲಾಗಿದೆ. ಈಜು ಪಟು ಉಡುಪಿಯ ರೋನನ್ ಉಡುಪಿ ಯಿಂದ ಹೆಜಮಾಡಿವರೆಗೆ ರ್ಯಾಲಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News