×
Ad

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಘಟಿಕೋತ್ಸವ

Update: 2016-04-03 23:52 IST

ಕುಂದಾಪುರ, ಎ.3: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಘಟಿಕೋತ್ಸವ ಶನಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಎಂಐಟಿಇಯ ಡೀನ್(ರೀಸರ್ಚ್) ಡಾ.ಗಣೇಶ ಐತಾಳ್, ಬೆಂಗಳೂರು ಐ.ಐ.ಎಸ್.ಸಿ.ರೀಸರ್ಚ್ ಅಸಿಸ್ಟೆಂಟ್ ಡಾ.ಪ್ರಾರ್ಥನಾ ಗೌಡ ಭಾಗವಹಿಸಿದ್ದರು. ಕಾಲೇಜಿನ ಬಿಇ ಅಂತಿಮ ವರ್ಷದಲ್ಲಿ ತೇರ್ಗಡೆ ಹೊಂದಿದ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ಅಧ್ಯಕ್ಷ ಸಿದ್ಧಾರ್ಥ ಜೆ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್ ಅಂಸಾಡಿ ಮತ್ತಿತರರು ಉಪಸ್ಥಿತರಿದ್ದರು. ಪೂಜಾಶ್ರೀ ಬಿ.ಪಿ. ಹಾಗೂ ಸಭ್ಯತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News