ಅಡ್ಯಾರ್‌ಪದವು: ಸಮುದಾಯ ಭವನಕ್ಕೆ ಶಿಲಾನ್ಯಾಸ
ಬಂಟ್ವಾಳ, ಎ.3: ಮಂಗಳೂರಿನ ಅಡ್ಯಾರ್‌ಪದವು ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಕಟ್ಟಡಕ್ಕೆ ಅಖಿಲ ಭಾರತ ಸುನ್ನಿ ಜಂ-ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಾಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಶನಿವಾರ ಶಿಲಾನ್ಯಾಸ ನೆರವೇರಿಸಿ ದುಆಗೈದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ, ಹಿಂದುಳಿದ, ದಲಿತರನ್ನು ಗಮನದಲ್ಲಿಟ್ಟು ಕೆಲಸ ಮಾಡುತ್ತಿದ್ದು, ಸಮುದಾಯ ಭವನಗಳ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿದ್ದ 25 ಲಕ್ಷ ರೂ.ವನ್ನು 50 ಲಕ್ಷ ರೂ.ಗೆ, ನಗರ ಪ್ರದೇಶದಲ್ಲಿ 50 ಲಕ್ಷ ರೂ.ವನ್ನು 1 ಕೋಟಿ ರೂ.ಗೆ ಹೆಚ್ಚಿಸಿದೆ ಎಂದರು.
ಕಾರ್ಯಕ್ರಮವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿ ಮಾತನಾಡಿದರು. ಅಡ್ಯಾರ್ ಪದವು ಎಂಜೆಎಂ ಖತೀಬ್ ಬನಾರಿ ಯೂಸುಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಬೈತಾರ್ ಬಿಜೆಎಂ ಮುದರ್ರಿಸ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ಗೈದರು. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎ.ಮೊಯ್ದಿನ್ ಬಾವ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮುಮ್ತಾಝ್ ಅಲಿ ಕೃಷ್ಣಾಪುರ, ಹೈದರ್ ಪರ್ತಿಪ್ಪಾಡಿ, ಶಾಕಿರ್ ಹಾಜಿ, ಮೆಲ್ವಿನ್ ಡಿಸೋಜ, ಎ.ಕೆ.ಸತ್ತಾರ್ ಅರ್ಕುಳ, ಶೇಖ್ ಬಾವ, ಕೂಳೂರು ಮಸೀದಿ ಇಮಾಮ್ ಶರೀಫ್ ಮುಸ್ಲಿಯಾರ್, ಜಿಪಂ ಸದಸ್ಯ ಅಬ್ದುಸ್ಸಮದ್, ಆಝಾದ್ ಹಾರ್ಡ್‌ವೇರ್ ಮಾಲಕ ಮನ್ಸೂರ್, ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಲಿ, ಇ.ಕೆ. ಟಿಂಬರ್ ಮಾಲಕ ರಫೀಕ್, ಕರಾವಳಿ ಪೆಟ್ರೋಲ್ ಬಂಕ್ ಮಾಲಕ ಅಬ್ದುಲ್ ಹಮೀದ್, ಕೆಎಸ್ಸಾರ್ಟಿಸಿ ಫರಂಗಿಪೇಟೆ ಇದರ ಎಫ್.ಎ.ಅಬ್ದುಲ್ ಖಾದರ್, ಮುಹಮ್ಮದ್ ಹಾಜಿ ಮುಡಿಪು, ಬಿ.ಎ.ಸಲೀಂ, ಕೋಶಾಧಿಕಾರಿ ಕೆ.ಹಮೀದ್, ಎಂ.ಕೆ.ಸುಲೈಮಾನ್ ಭಾಗವಹಿಸಿದರು. ಎಂಜೆಎಂ ಪ್ರ.ಕಾರ್ಯದರ್ಶಿ ಬಿ.ಎ.ಅಬ್ದುಲ್ ಸತ್ತಾರ್ ಸಖಾಫಿ ಸ್ವಾಗತಿಸಿ, ವಂದಿಸಿದರು.