×
Ad

ಸುರತ್ಕಲ್ : ಕರಾವಳಿ ಕೋಳಿ ಮಾರಾಟಗಾರರ ಸಂಘದ 4ನೇ ವಾರ್ಷಿಕ ಮಹಾಸಭೆ

Update: 2016-04-05 17:10 IST

ಸುರತ್ಕಲ್, ಎ.4: ಕಿನ್ನಿಗೋಳಿ, ಮುಲ್ಕಿ, ಕಾರ್ನಾಡು, ಪಕ್ಷಿಕೆರೆ, ಹಳೆಯಂಗಡಿ, ಮುಕ್ಕ, ಸುರತ್ಕಲ್, ಕಾಟಿಪಳ್ಳ- ಕೃಷ್ಣಾಪುರ, ಕುಳಾಯಿ ಬೈಕಂಪಾಡಿ ವ್ಯಾಪ್ತಿಯ ಕರಾವಳಿ ಕೋಳಿ ಮಾರಾಟಗಾರರ ಸಂಘದ 4ನೇ ವಾರ್ಷಿಕ ಮಹಾಸಭೆ ಸುರತ್ಕಲ್ ಲಲಿತ್ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ನಡೆಯಿತು.  ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಉತ್ತರ ವಲಯ ಶಾಸಕ ಬಿ.ಎ. ಮೊಯ್ದಿನ್ ಬಾವಾ, ಕೋಳಿಮಾರಾಟಗಾರರು ಕೇವಲ ಸಂಘವಾಗಿ ತೊಡಗಿಕೊಳ್ಳದೆ ಸರಕಾರ ಕಲ್ಪಿಸುತ್ತಿರುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಸಂಘದ ವತಿಯಿಂದ ನಿಧಿ ಸ್ಥಾಪಿಸಿ ತಮ್ಮ ಸಂಪಾದನೆಯ ಒಂದಂಶವನ್ನು ಬಡವರ ಸೇವೆಗಾಗಿ ವಿನಿಯೋಗಿಸಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಳಿಕ 16-17 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹಸನ್ ಶರೀಫ್ ವಹಿಸಿದ್ದರು. ಮಂಗಳೂರು ಮ.ನಾ.ಪಾ.ದ ಮಾಜಿ ಉಪಮೇಯರ್ ಪುರುಶೋತ್ತಮ ಚಿತ್ರಾಪುರ, ಉದ್ಯಮಿ ಹರಿನಾಥ್ ಸಾಲ್ಯಾನ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಲಜಾ, ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಫಿಲೊಮಿನಾ ಸಿಕ್ವೇರ, ಕೆಮ್ರಾಲ್ ಗ್ರಾ.ಪಂ.ಅಧ್ಯಕ್ಷ ನಾಗೇಶ್ ಬೊಳ್ಳೂರು ಉಪಸ್ಥಿತರಿದ್ದರು.
ಸಂಘದ ಸದಸ್ಯ ಪುರಂದರ ಸಾಲ್ಯಾನ್ ಸ್ವಾಗತಿಸಿದರು. ಬಶೀರ್ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News