×
Ad

ಸುರತ್ಕಲ್ ; ಪಿಯುಸಿ ಪ್ರಶ್ನೇಪತ್ರಿಕೆಯ ಗೌಪ್ಯತೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲ, ರಾ.ಹೆದ್ದಾರಿ ತಡೆದು ಪ್ರತಿಭಟನೆ

Update: 2016-04-05 17:16 IST

ಸುರತ್ಕಲ್, ಎ.4: ಜಿಲ್ಲೆಯಲ್ಲಿ ಮರಳು ಅಭಾವ, ರಾಜ್ಯದಲ್ಲಿ ವಿದ್ಯುತ್ ಅಭಾವ ಹಾಗೂ ದರ ಏರಿಕೆ, ಇಂಧನದ ಮೇಲೆ ರಾಜ್ಯ ಸರಕಾರದ ಸೆಸ್ ಹಾಗೂ ಪಿಯುಸಿ ಪ್ರಶ್ನೇಪತ್ರಿಕೆಯ ಗೌಪ್ಯತೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿಯ ಮಂಗಳೂರು ಉತ್ತರ ವಲಯ ಮಂಡಳದ ವತಿಯಿಂದ ರಾ.ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೊಟ್ಯಾನ್, ಜಿಲ್ಲೆಯಲ್ಲಿ ನಿಯಮಗಳ ಹೆಸರಿನಲ್ಲಿ ಮರಳಿನ ಕೃತಕ ಅಭಾವವನ್ನು ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಬಡ ಕೂಲಿ ಕಾರ್ಮಿಕರು ಹಾಗೂ ಜನತೆಯನ್ನು ವಂಚಿಸಲಾಗುತ್ತಿದೆ. ಈ ಕುಕೃತ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಕ್ಷೇಪ ಮಾಡಿಕೊಂಡಿದ್ದಾರೆ ಎಂದರು.

 ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ವಿತ್ವಕ್ಕೆ ಬಂದ ಬಳಿಕ ಗುಣಮಟ್ಟದ ವಿದ್ಯತ್ ಮರೀಚಿಕೆಯಾಗಿದ್ದು, ಘೋಶಿತ ಮತ್ತು ಅಘೋಶಿತ ವಿದ್ಯುತ್ ಕಡಿತ ಗೊಳಿಸಿ ರಾಜ್ಯದ ಜನತೆಗೆ ಕತ್ತಲೆ ಭಾಗ್ಯ ಕರುಣಿಸಿದ್ದಾರೆ. ಅಲ್ಲದೆ, ವಿದ್ಯುತ್ ಕಡಿತಗೊಳಿಸುವ ಜೊತೆಗೆ ದರ ಏರಿಕೆಮಾಡಿ ಜನತೆಗೆ ಗಾಯದಮೇಲೆ ಬರೆ ಎಳೆಯಲಾಗುತ್ತಿದೆ ಈ ನೀತಿಯನ್ನು ಬಾರತೀಯ ಜನತಾ ಪಾರ್ಟಿ ತೀವೃವಾಗಿ ಖಂಡಿಸುತ್ತದೆ ಎಂದರು.
ಬಳಿಕ ಮಾತನಾಡಿದ ಮಾಜಿ ಸಚಿವಕೃಷ್ಣ ಜೆ. ಪಾಲೆಮಾರ್, ಕೇಂದ್ರದಲ್ಲಿ ಎನ್‌ಡಿಎ ಸರಕಾರದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆಗಳು ಯಥೇಚ್ಚವಾಗಿ ಇಳಿಕೆಯಾದರೂ ರಾಜ್ಯ ಸರಕಾರ ಸೆಸ್ ವಿಧಿಸುವ ಮೂಲಕ ಜನತೆಗೆ ಅನ್ಯಾಯ ಎಸಗುತ್ತಿದೆ. ಎರಡೆರಡು ಬಾರಿ ಪಿಯುಸಿಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇಲಾಖೆಯ ಅಧಿಕಾರಿಗ್ಳು ಶಾಮೀಲಾಗಿರುವ ಬಗ್ಗೆ ತಿಳಿದಿದ್ದರೂ ಶಿಕ್ಷಣ ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿ ಹಗೂ ಹೆತ್ತವರ ಮನವೊಲಿಸುವ ಸಲುವಾಗಿ ಅಧಿಕಾರಿಗಳನ್ನು ಅಮಾನತು ಗೊಳಿಸಿ ಪ್ರಕರಣದಿಂದ ಕೈತೊಳೆದು ಕೊಂಡಿದೆ. ಅಲ್ಲದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಬೇಜಾವಾಬ್ದಾರಿಯುತ ಹೇಲಿಕೆ ನೀಡುತ್ತಿರುವುದು ಅವರ ದೌರ್ಬಲ್ಯವನ್ನು ಎತ್ತಿತೋರುತ್ತಿದ್ದು, ಸಚಿವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
 ಪ್ರತಿಭಟನೆಯಲ್ಲಿ ಉಪಮೇಯರ್ ಕುಮಾರಿ ಸುಮಿತ್ರಾ, ಮಾಜೀ ಮಯರ್ ರಜಣಿ ದುಗ್ಗಣ್ಣ, ಬಿಜೆಪಿಯ ಮಂಗಳೂರು ನಗರ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
  ಈ ಸಂದರ್ಭ ಪ್ರತಿಭಟನಾ ನಿರತರು ಕೆಲ ಕಾಲ ರಾ.ಹೆ. 66ನ್ನು ತಡೆದು ವಾಹನ ಸಂಚಾರಕ್ಕೆ ತಡೆಯೊಡ್ಡದಾಗ ಸುರತ್ಕಲ್ ವೃತ್ತ ನಿರೀಕ್ಷ ಚೆಲುವರಾಜು, ಮುಲ್ಕಿ ವೃತ್ತ ನಿರಕ್ಷಕ ರಾಮಚಂದ್ರ ನಾಯಕ್ ಸೇರಿದಂತೆ ಪೊಲೀಸರು ಪ್ರತಿಭಟನಾ ನಿರತರನ್ನು ಹೆದ್ದಾರಿಯಿಂದ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News