×
Ad

ಕಾರ್ಕಳ : ಬಲಾಢ್ಯರನ್ನು ನಾಚಿಸಬಲ್ಲ ವಿಕಲಚೇತನ

Update: 2016-04-05 17:50 IST
-ಅಡಿಕೆ ಮರವೇರುತ್ತಿರುವ ಕುಟ್ಟಿ.

ಕಾರ್ಕಳ : ಆತ ಸರಸರನೇ ಓಡಾಡ ಬಲ್ಲ......! ಎಂತಹ ಮರವನ್ನಾದರೂ ಏರ ಬಲ್ಲ....! ಸ್ವಾವಲಂಬಿಯಾಗಿ ಬದುಕಬಲ್ಲ....! ಎಂತಹ ಬಲಾಢ್ಯರನ್ನು ಕೂಡಾ ನಾಚಿಸಬಲ್ಲ...! ಆದರೆ ಈತ ಎಲ್ಲರಂತಲ್ಲ.... ಹುಟ್ಟು ವಿಕಲಚೇತನ....!

ಕಾಲಿಲ್ಲದಿದ್ದರೇನಂತೆ.... ತಾನೊಬ್ಬ ಸ್ವಾವಲಂಬಿ ಎನ್ನುವುದನ್ನು ಆತ ಸಾಧಿಸಿ ತೋರಿಸಿದ್ದಾನೆ. ಆತನ ಹೆಸರು ಕುಟ್ಟಿ. ವಯಸ್ಸು 44. ಬಾಳೆ ಹೊನ್ನೂರಿನಲ್ಲಿದ್ದ ಜನಿಸಿದ ಅವರು, ಕಾರ್ಕಳ ತಾಲೂಕಿನ ನೀರೆ ಗ್ರಾ.ಪಂ.ವ್ಯಾಪ್ತಿಯ ಕಣಜಾರಿಗೆ ಬಂದು 24 ವರ್ಷಗಳೇ ಕಳೆದಿವೆ. ಕಣಜಾರಿನ ಯುವತಿಯನ್ನು ವಿವಾಹವಾದ ಪರಿಣಾಮ ಕಣಜಾರಿನಲ್ಲೇ ಗಟ್ಟಿ ನೆಲೆಯನ್ನು ಪಡೆದುಕೊಳ್ಳುವಂತಾಯಿತು. ಪರಿಶಿಷ್ಟ ಜಾತಿಗೆ ಸೇರಿದ ಕುಟ್ಟಿ ಅವರು ಬಾಳೆಹೊನ್ನೂರಿನ ಕುರ್ಮಿಲ ಮತ್ತು ನೊಕ್ಕು ದಂಪತಿಯ ಐದನೇ ಪುತ್ರ. ಹುಟ್ಟುವಾಗಲೇ ಎರಡು ಕಾಲಿಲ್ಲದ ವಿಕಲಚೇತನ. ಆದರೂ ಬದುಕಿಗೆ ಅಂಜದೆ ಸ್ವಾವಲಂಬಿಯಾಗಿ ಬದುಕುವ ಛಲ ಹೊಂದಿದ್ದಾರೆ. ಬಾಲ್ಯದಲ್ಲಿ ಮನೆಯವರು ಕೂಲಿ ಕೆಲಸ ನಿರ್ವಹಿಸುತ್ತಿರುವುದನ್ನು ಕಂಡು, ತಾನು ಸ್ವಾವಲಂಬಿಯಾಗಿ ಬದುಕಬೇಕೆಂಬ ಹಠ ತೊಟ್ಟಿದ್ದರು. ಆದರೆ ಅಂಗವೈಕಲ್ಯತೆ ಆತನಿಗೆ ಉಜ್ವಲ ಭವಿಷ್ಯ ಕಂಡುಕೊಳ್ಳುವಲ್ಲಿ ಅಡ್ಡಿಪಡಿಸಿತ್ತು. ಆದರೂ ಛಲಬಿಡದೆ ಸತತ ಪರಿಶ್ರಮಪಟ್ಟು ಆಯ್ದುಕೊಂಡದ್ದು ಮರ ಹತ್ತುವ ಈ ಸಾಹಸ ವೃತ್ತಿಯನ್ನು. ತೆಂಗು, ಕಂಗು ಮತ್ತಿತರ ಮರವನ್ನೇರಿ ಬದುಕು ಕಟ್ಟಿಕೊಳ್ಳಲು ಕುಟ್ಟಿ ಪ್ರಾರಂಭಿಸಿದರು. ಅಂತೆಯೇ ತನ್ನ ನಿರಂತರ ಪ್ರಯತ್ನವೂ ಮುಂದುವರೆದಿತ್ತು. ಸಣ್ಣ ಸಣ್ಣ ಮರವನ್ನೇರುವ ಮೂಲಕ ವೃತ್ತಿಯನ್ನಾರಂಭಿಸಿದ ಕುಟ್ಟಿ, ಪ್ರಸ್ತುತ ಎಂತಹ ದೈತ್ಯಾಕಾರದ ಮರವನ್ನೇರಿ ಆಶ್ಚರ್ಯ ಹುಟ್ಟಿಸಬಲ್ಲರು. ಅವರು ಮರವನ್ನೇರುವುದನ್ನು ಕಂಡರೇ ಯಾರೂ..ನಿಬ್ಬೇರಗಾಗುವುದಿಲ್ಲ...? ಹೇಲಿ. ಮರವನ್ನು ಹತ್ತಿ ತೆಂಗು, ಅಡಿಕೆ ಕೀಳುವ ಸಾಹಸದ ಕೆಲಸವನ್ನು ನಿರ್ವಹಿಸುವವರೇ ವಿರಳ. ಅಂತಹುವುದರಲ್ಲಿ ಆತನ ಪರಿಶ್ರಮಕ್ಕೆ ಭೇಷ್ ಎನ್ನಲೇ ಬೇಕು. ಸಣ್ಣ ಗಾತ್ರದ ಎಡಗಾಲು, ಬಲಗಾಲು ಇಲ್ಲವೇ ಇಲ್ಲ. ಎರಡೂ ಕೈಯಲ್ಲಿ ಪುಟ್ಟ ಊರುಗೋಲು. ಕರೆದರೆ ಸರಸರನೇ ಓಡೋಡಿ ಬರುವ ಕುಟ್ಟಿ ಅವರ ಸಾಧನೆ ಸರಿಯಿದ್ದವರನ್ನೂ ಮೀರಿಸಬಲ್ಲುವುದು. ಕೇವಲ ಕೈಯ ಆಧಾರದಲ್ಲೇ ಮರ ಹತ್ತುವ ಕುಟ್ಟಿ, ಆಸುಪಾಸಿನ ಪರಿಸರದಲ್ಲಿ ತೆಂಗು, ಅಡಿಕೆ ಕೀಳುವಲ್ಲಿ ಪ್ರಾವಿಣ್ಯ ಪಡೆದಿದ್ದಾರೆ. ಜತೆಗೆ ಅವರ ಬದುಕಿಗೆ ಆಧಾರವೂ ಅದೇ ವೃತ್ತಿಯಾಗಿದೆ.
ಪತ್ನಿ ಗಿರಿಜಾ ಸಮೀಪದ ಗೇರು ಬೀಜ ಪ್ಯಾಕ್ಟ್ರೀಯಲ್ಲಿ ಉದ್ಯೋಗಿ. ನಾಲ್ಕು ಮಕ್ಕಳ ಸಮೇತ ಕುಟ್ಟಿ ಅವರದ್ದು ಸಂತೃಪ್ತ ಬದುಕು. ವಿಕಲಚೇತನರಾದರೇನಂತೆ..? ಸ್ವಾವಂಬಿಯಾಗಿ ಬದುಕುವ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ.

ಪತ್ರಕರ್ತರ ಬಳಿ " ಎನ್ನ ಪೇಪರ್ಡ್‌ ಬರ್ಪುಂಡಾ...?, ಎಂದು ಪ್ರಶ್ನಿಸಿದ ಕುಟ್ಟಿ ಹತ್ತಿದ್ದು, ಮನೆಯ ಸಮೀಪದ ಅಡಿಕೆ ಮರವನ್ನು....ನಗುನಗುತ್ತಾ " ಪೊಟೋ ದೆಪ್ಪರೆ ಯಾವೇ..., ನನೊಂತೆ ಮಿತ್ತ್ ಪೊವೋಡೆ" ಎಂದು ಕೇಳಿದ್ದಾರೆ. ಸಾಕು ಎಂದಾಕ್ಷಣ ಕ್ಯಾಮರಾಕ್ಕೇ ಫೋಸ್ ನೀಡಿದರು. ಕೆಳಗಿಳಿದು ನಗುನಗುತ್ತಾ ಉಪಚರಿಸಿದರು. ಅವರ ಮುಖದಲ್ಲಿ ಕೀಳರಿಮೆ ಎದ್ದು ಕಾಣಲಿಲ್ಲ. ತಾನೊಬ್ಬ ವಿಕಲಚೇತನ ಎನ್ನುವುದು ಅವರು ಮಾತು ನಡೆ ನುಡಿಯಲ್ಲಿ ಅನಿಸಲೇ ಇಲ್ಲ. ಇನ್ನು ಮರ ಏರಲು ಸಾಧ್ಯವೇ ಇಲ್ಲ :
 
ಪ್ರಸ್ತುತ ವಯಸ್ಸಾಗುತ್ತ ಬಂದಿದೆ. ಇನ್ನು ಮರ ಏರಲು ಸಾಧ್ಯವಿಲ್ಲ. ಆದರೆ ಹೊಟ್ಟೆ ಪಾಡಿಗೇನು ? ಎಂಬ ಚಿಂತೆ. ಕಳೆದ ಕೆಲವು ತಿಂಗಳ ಹಿಂದೆ ಗೂಡಂಗಡಿಯನ್ನು ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದೆ. ಜಿಲ್ಲಾಧಿಕಾರಿಗಳ ಕಛೇರಿಯಿಂದ ಅಗತ್ಯ ಮಾಹಿತಿಯನ್ನು ಅಂಗವಿಕಲ ಕಲ್ಯಾಣ ಕೇಂದ್ರದ ಮೂಲಕ ಸಿದ್ದಪಡಿಸಿ ನೀಡುವಂತೆ ಸೂಚನೆ ಬಂದಿದೆ. ಆದರೆ ತಾಲೂಕು ಕಛೇರಿಗೆ ಕಳೆದ ಒಂದು ತಿಂಗಳಿನಿಂದ ಅಲೆದಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎನ್ನುವ ಅಳಲು ಕುಟ್ಟಿ ಅವರಿಂದ ಕೇಳಿ ಬಂದಿದೆ. ಅಭಿಪ್ರಾಯ :

ಒಂದು ತೆಂಗಿನ ಮರಕ್ಕೇರಿದರೆ 20ರೂ. ಸಿಗುತ್ತದೆ. ಅದರಲ್ಲೂ ನಿತ್ಯ ಕಾಯಕ ದೊರೆಯುವುದಿಲ್ಲ. ಸರಕಾರದಿಂದ ಒಂದು ಸಾವಿರ ರೂ. ಅಂಗವಿಕಲ ವೇತನ ದೊರೆಯುತ್ತದೆ. ನಾನು ನಿರ್ವಹಿಸುವ ವೃತ್ತಿಯಿಂದ ಬದುಕಿನಲ್ಲಿ ಸಂತೃಪ್ತಿ ಇದೆ. ಆದರೆ ಮುಂದೆ ಏನು ಮಾಡುವುದು ?. ಗೂಡಂಗಡಿ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸುವ ಯೋಜನೆಯಿದೆ. ಅಧಿಕಾರಿಗಳ ಸಹಕಾರ ಬೇಕು ಎನ್ನುತ್ತಾರೆ ವಿಕಲಚೇತನ ಕುಟ್ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News