ಪಡುಬಿದಿರೆ : ಎಪ್ರಿಲ್ 8ರಿಂದ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ
ಪಡುಬಿದ್ರಿ: ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಎಪ್ರಿಲ್ 8ರಿಂದ 10ರತನಕ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ವೆಂಕಟೇಶ್ ಟ್ರೋಫಿ-2016 ನಡೆಯಲಿದೆ ಎಂದು ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ ತಿಳಿಸಿದ್ದಾರೆ.
ಕ್ಲಬ್‌ನ 35ನೇ ವರ್ಷಾಚರಣೆ ಅಂಗವಾಗಿ ನಡೆಯಲಿರುವ ಈ ಪಂದ್ಯಾಟದಲ್ಲಿ ಮುಂಬೈ, ಚೆನ್ನೈ, ಕೇರಳ, ಆಂಧ್ರಪ್ರದೇಶ ಸಹಿತ ಬೆಂಗಳೂರು, ತುಮಕೂರು, ಮೈಸೂರು ಕಡೆಗಳಿಂದ ಆಯ್ದ 30 ತಂಡಗಳು ಭಾಗವಹಿಸಲಿದೆ. ಪಂದ್ಯಾಕೂಟದ ವಿಜೇತರಿಗೆ 3,03,333 ರೂ. ಹಾಗೂ ರನ್ನರ್ ಅಪ್‌ಗೆ 1,50,555 ರೂ. ಸಹಿತ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಕೂಟದ ವಿಶೇಷತೆ: ಅಂತರಾಷ್ಟ್ರೀಯ ಏಕದಿನ ಪಂದ್ಯದಂತೆ ತೃತೀಯ ಅಂಪೈರ್, ಕರ್ನಾಟಕ ರಾಜ್ಯಾದ್ಯಂತ ಟಿವಿ ನೇರ ಪ್ರಸಾರ, ಸುಮಾರು 15000 ಕ್ರೀಡಾಭಿಮಾನಿಗಳಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ಹೊರ ರಾಜ್ಯದ ತಂಡಗಳಿಗೆ ಸಂಪೂರ್ಣ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಎಪ್ರಿಲ್ 8 ಶುಕ್ರವಾರ ಪಂದ್ಯಕೂಟದ ಉದ್ಘಾಟನೆಯನ್ನು ರಾಜ್ಯ ಅರಣ್ಯ ಸಚಿವ ರಮಾನಾಥ ರೈ ನಡೆಸಲಿರುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎ. 10ರಂದು ಭಾನುವಾರ ನಡೆಯುವ ಸಮಾರೋಪ ಸಮಾರಂಭದಲ್ಲಿಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶಸ್ತಿ ವಿತರಿಸುವರು. ಸಚಿವರುಗಳಾದ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಪ್ರಮೋದ್ ಮಧ್ವರಾಜ್, ಎಂಎಲ್ಸಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಐವನ್ ಡಿಸೋಜಾ, ಮತ್ತಿತರರು ಮುಖ್ಯ ಅತಿಥಿಗಳಾಗಿರುವರು.
ಸಮಾರಂಭದಲ್ಲಿ ಖ್ಯಾತ ಪ್ರೊಕಬಡ್ಡಿ ಆಟಗಾರರಾದ ರಿಶಾಂಕ್ ದೇವಾಡಿಗ, ಸುಕೇಶ್ ಹೆಗ್ಡೆ, ಪ್ರಶಾಂತ್ ರೈ, ಗೌರವ್ ಶೆಟ್ಟಿ, ಮಮತಾ ಪೂಜಾರಿ, ಇತ್ತೀಚೆಗೆ ದೇಶೀಯ ಕ್ರಿಕೆಟ್ ನ ಪಂದ್ಯವೊಂದರಲ್ಲಿ 1009 ರನ್ ಹೊಡೆದ ಪ್ರಣವ್ ಧನವಾಡೆ, ಖ್ಯಾತ ಚಲನಚಿತ್ರ ನಟರಾದ ಗುರುಕಿರಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ (ರಂಗಿತರಂಗ), ಅರ್ಜುನ್ ಕಾಪಿಕಾಡ್ (ಚಂಡಿಕೋರಿ) ಭಾಗವಹಿಸಲಿದ್ದಾರೆ.
ಪಡುಬಿದ್ರಿ ಬೋರ್ಡು ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಮೈದಾನವನ್ನು ಡ್ರೋನ್ ಮೂಲಕ ತೆಗೆದ ಚಿತ್ರ.