×
Ad

ಕಾಸರಗೋಡು : ಗಲ್ಫ್ ಉದ್ಯೋಗಿ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

Update: 2016-04-05 18:13 IST

ಕಾಸರಗೋಡು : ಎರಡು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ  ಗಲ್ಫ್ ಉದ್ಯೋಗಿ  ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾನ್ಚಾ೦ಗಾಡ್ ನಲ್ಲಿ ನಡೆದಿದೆ.
ಮುರಿಯನಾವಿನ  ಶಶಿಧರ ( 30 ) ಮೃತಪಟ್ಟ ಯುವಕ .  ಆದಿತ್ಯವಾರ ಕೊವ್ವಲ್ ಪಳ್ಳಿಯ  ಸಮೀಪದ  ಸಭಾಂಗಣದಲ್ಲಿ  ವಿವಾಹ ನಡೆದಿತ್ತು . ಕುಶಾಲನಗರದ ಯುವತಿ ಜೊತೆ ವಿವಾಹವಾಗಿತ್ತು.
ಶೌ ಚಾಲಯಕ್ಕೆ  ತೆರಳಿದ್ದ  ಶಶಿಧರ ಹಲವು ಸಮಯ ಕಳೆದರೂ  ಹೊರಬಾರದಿದ್ದುದರಿಂದ  ಸಂಶಯಗೊಂಡು ಬಾಗಿಲು ತೆರೆದು ನೋಡಿದಾಗ  ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆ.
ಶಾರ್ಜಾ ದಲ್ಲಿ  ಉದ್ಯೋಗ ದಲ್ಲಿದ್ದ   ಶಶಿಧರ  ಮಾರ್ಚ್ ೧೮ ರಂದು ಊರಿಗೆ ಬಂದಿದ್ದರು.  ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ .  ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News