×
Ad

ಪಠಾಣ್ ಕೋಟ್ ದಾಳಿಗೂ ತಂಝೀಲ್ ಕೊಲೆಗೂ ಸಂಬಂಧವೇನು ?

Update: 2016-04-05 19:11 IST

ಹೊಸದಿಲ್ಲಿ , ಎ. 5: ಎನ್ ಐ ಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಬರ್ಬರ ಕೊಲೆಯಲ್ಲಿ ನಿಜವಾಗಿ ಯಾರ ಕೈವಾಡವಿದೆ ? ಪಠಾಣ್ ಕೋಟ್ ದಾಳಿಗೂ ಅವರ ಕೊಲೆಗೂ ಏನಾದರೂ ಸಂಬಂಧವಿದೆಯೇ ? 2003 ರಲ್ಲಿ ಗುಜರಾತ್ ನಲ್ಲಿ ನಡೆದ ಹರೇನ್ ಪಾಂಡ್ಯ ಕೊಲೆಗೂ ತಂಝೀಲ್ ಕೊಲೆಗೂ ಸಾಮ್ಯತೆ ಇದೆಯೇ ? ಪಠಾಣ್ ಕೊಟ್  ದಾಳಿಯ ಕುರಿತ ಮಹತ್ವದ ಸುಳಿವೊಂದು  ತಂಝೀಲ್ ಗೆ ಸಿಕ್ಕಿತ್ತೇ ? ಅದು ಯಾವುದೇ ಕಾರಣಕ್ಕೂ ಬಹಿರಂಗವಾಗಬಾರದು ಎಂದು 21 ಗುಂಡುಗಳನ್ನು ಹಾರಿಸಿ  ತಂಝೀಲ್ ರನ್ನು ಮುಗಿಸಲಾಯಿತೆ ? ಈ ಎಲ್ಲ ಆತಂಕಕಾರಿ ಪ್ರಶ್ನೆಗಳನ್ನು ಗುಜರಾತ್ ನ  ಮಾಜಿ ಹಿರಿಯ  ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಎತ್ತಿದ್ದಾರೆ. 

ಸಂಜೀವ್ ಭಟ್ ಅವರು ಎಪ್ರಿಲ್ 5 ರಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದ ಪೋಸ್ಟ್ ಹೀಗಿದೆ : " ಬಲ್ಲ ಮೂಲಗಳ ಪ್ರಕಾರ ಅಕ್ಷರಧಾಮ ಭಯೋತ್ಪಾದಕ ದಾಳಿ ದೇಶದೊಳಗಿನವರದೇ ಕೃತ್ಯ ಎಂಬ ಕುರಿತು ಸ್ಪೋಟಕ ಸತ್ಯವೊಂದನ್ನು 2003 ರಲ್ಲಿ ಹರೇನ್ ಪಾಂಡ್ಯ ಬಹಿರಂಗಪಡಿಸಲು ಸಜ್ಜಾಗಿದ್ದರು. ಆದರೆ ಹರೇನ್ ಅವರನ್ನು ಈಗ ಎನ್ ಐ ಎ ಅಧಿಕಾರಿ ತಂಝೀಲ್ ಅಹ್ಮದ್ ಅವರನ್ನು ಕೊಂದಂತೆಯೇ ಕಾರಿನೊಳಗಿರುವಾಗ ಕೊಂದು ಹಾಕಲಾಯಿತು. ಈಗ ಪಾಕ್ ' ಸತ್ಯ ಶೋಧನಾ ' ತಂಡದ ಪ್ರಕಾರ  ಪಠಾಣ್ ಕೊಟ್  ದಾಳಿಯಲ್ಲಿ ಭಾರತ ಸರಕಾರದ ಪಾತ್ರದ ಕುರಿತು ಭಯಾನಕ ಸತ್ಯವೊಂದು ತಂಝೀಲ್ ಅಹ್ಮದ್ ಗೆ ಸಿಕ್ಕಿತ್ತು. ಅದಕ್ಕಾಗಿಯೇ ಅವರನ್ನು ಮುಗಿಸಲಾಗಿದೆ. ಇತಿಹಾಸ ಮತ್ತೆ ದುರಂತವಾಗಿ ಮರುಕಳಿಸುತ್ತಿದೆಯೇ ? " 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News