×
Ad

ಉಳ್ಳಾಲ: ವಿದ್ಯುತ್ ದರ ಏರಿಕೆ ವಿರುದ್ಧ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ

Update: 2016-04-05 20:08 IST

 ಉಳ್ಳಾಲ: ಜನರ ಮತವನ್ನು ಪಡೆದು ಜನರಿಗೆ ಹೊರೆ ಹೊರಿಸುವುದಿಲ್ಲ ಎಂದ ಸರಕಾರ ಇಂದು ಮಾತು ತಪ್ಪಿದೆ. ಸರಕಾರ ಆದಷ್ಟು ಬೇಗ ಬೆಲೆ ಏರಿಕೆಯ ಆದೇಶವನ್ನು ವಾಪಸ್ಸು ಪಡೆಯಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ ಎಚ್ಚರಿಕೆ ನೀಡಿದಾರೆ.
 ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ರಾಜ್ಯ ಸರಕಾರ ವಿದ್ಯುತ್ ದರವನ್ನು ಏರಿಸಿರುವುದರ ವಿರುದ್ಧ ಮಂಗಳವಾರ ತೊಕ್ಕೊಟ್ಟು ಬಸು ನಿಲ್ದಾಣದ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
   ಜನಸಾಮಾನ್ಯರಲ್ಲಿ ಕರುಣೆಇಲ್ಲ ಸರಕಾರ ದೈನಂದಿನ ವಸ್ತುಗಳ ಬೆಲೆ ಜತೆಗೆ ವಿದ್ಯುತ್ ದರವನ್ನು ಏರಿಸುವುದರ ಮೂಲಕ ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರ ಮೇಲೆ ಹೊರೆಯಾಗಿಸಿರುವುದು ಖಂಡನೀಯ. ದಿನಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಜನರಿಗೆ ದುರಂತದ ಸಂಗತಿಯಾಗಿದೆ. ಅದರಲ್ಲೂ ವ್ಯಾಪಾರ ವಹಿವಾಟುಗಳು ಸರಿಯಾಗಿ ನಡೆಯದ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಮಾಡುವ ಮೂಲಕ ಜನಸಾಮಾನ್ಯರ ಜೀವನದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದರು.
         G¥À¹ÜvÀjzÀÝgÀÄ.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಲತೀಫ್ ಕೋಡಿಜಾಲ್, ಸಾಮಾಜಿಕ ಕಾರ್ಯಕರ್ತ ಮಧು ಜೀವನ್ ಡಿಸೋಜ, ಪುದು ವಲಯ ಅಧ್ಯಕ್ಷ ಸುಲೈಮಾನ್ ಉಸ್ತಾದ್, ಮಂಗಳೂರು ನಗರಸಭೆ ಸಮಿತಿ ಅಧ್ಯಕ್ಷ ರವೂಫ್ ಉಳ್ಳಾಲ್, ಮುಡಿಪು ವಲಯ ಅಧ್ಯಕ್ಷ ಅಸೀಫ್ ಪಜೀರ್, ಕೊಣಾಜೆ ವಲಯ ಅಧ್ಯಕ್ಷ ಬಶೀರ್ ಹರೇಕಳ, ದೇರಳಕಟ್ಟೆ ವಲಯ ಅಧ್ಯಕ್ಷ ಶಾಕಿರ್ ಮೊಂಟೆಪದವು, ಸಜೀಪ ವಲಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಸ್.ಎನ್, ಮಂಗಳೂರು ವಿಧಾನಸಭಾ ಕ್ಷೇತ್ರ ಸದಸ್ಯ ನೌಶದ್ ಕಲ್ಕಟ್ಟ ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ, ಅಬ್ದುಲ್ ಖಾದರ್ ಅಮ್ಮೆಮ್ಮಾರ್ ಸ್ವಾಗತಿಸಿದರು.ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರದಾನ ಕಾರ್ಯದರ್ಶಿ ಹಾರೀಸ್ ಮಲಾರ್ ಪ್ರಾಸ್ತಾವನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News