ಮುಂಡಗೋಡ : ಅಂಚೆ ಕಚೇರಿಯ ಬೀಗ ಮುರಿದು ನಗದು ಹಾಗು ಅಂಚೆ ಪಾರ್ಸಲ್ ಕಳ್ಳತನ
Update: 2016-04-05 20:41 IST
ಮುಂಡಗೋಡ : ಅಂಚೆ ಕಚೇರಿಯ ಬೀಗ ಮುರಿದು ನಗದು ಹಾಗು ಅಂಚೆ ಪಾರ್ಸಲ್‌ನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ತಾಲೂಕಿನ ಇಂದೂರ ಗ್ರಾಮದ ಅಂಚೆಕಚೇರಿಯಲ್ಲಿ ನಡೆದಿದೆ.
ಕಳ್ಳರು ಬೀಗ ಮುರಿದು ಕಚೇರಿಯಲ್ಲಿಯ ಕಾಗದ ಪತ್ರಗಳನ್ನು ತಡಕಾಡಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಕ್ಯಾಶ ಬಾಕ್ಸ ನಲ್ಲಿದ್ದ 1935=00 ರೂಗಳನ್ನು ತಮ್ಮ ಜೇಬಿಗೆ ಇಳಿಸಿಕೊಂಡು ಎರಡು ಪಾರ್ಸ್‌ಗಳಲ್ಲಿ ಒಂದನ್ನು ಕಿತ್ತಾಡಿ ಅಲ್ಲೇ ಬಿಟ್ಟಿದ್ದಾರೆ ಇನ್ನೊಂದನ್ನು ಹೊತ್ತೊಯ್ದಿದ್ದಾರೆ. ಕಳುವಾದ ಪಾರ್ಸೇಲ್ ಮೌಲ್ಯ 2398=00 ಎಂದು ಹೇಳಲಾಗಿದೆ.
ಈ ಘಟನೆಯು ರವಿವಾರ ರಾತ್ರಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ
ಈ ಕುರಿತು ಇಂದೂರ ಪೋಸ್ಟ ಮಾಸ್ಟರ ವಸಂತ ಬೆಳವಂತರ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.