ಮುಂಡಗೋಡ : ಬಿಡಾಡಿ ದನ ಹಾಯ್ದು ವಿದ್ಯಾರ್ಥಿನಿಗೆ ಗಂಭೀರಗಾಯ
ಮುಂಡಗೋಡ : ವಿದ್ಯಾರ್ಥಿನಿಗೆ ಬಿಡಾಡಿದನ ಹಾಯ್ದು ತಿವಿದು ಗಾಯಗೊಳಿಸಿದ ಘಟನೆ ಪಟ್ಟಣದ ಸಂತೆಯಲ್ಲಿ ಸೋಮವಾರ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಅರೆಗೋಪ್ಪ ಗ್ರಾಮದ ನೇತ್ರಾವತಿ ಸಂಗಪ್ಪ ಹರಿಜನ ಎಂದು ತಿಳಿದು ಬಂದಿದೆ. ಈಕೆಯು ಇಲ್ಲಿಯ ಸರಕಾರಿ ಪ್ರಥಮ ದರ್ಜೆಯ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಎಂದು ಹೇಳಲಾಗಿದ್ದು. ನೇತ್ರಾವತಿಯು ಇಲ್ಲಿಯ ಲೊಯಲಾ ಸಂಸ್ಥೆಯಲ್ಲಿ ಸ್ನೇಹಿತೆ ಜೊತೆ ಕಂಪ್ಯೂಟರ್ ಕ್ಲಾಸ್ ತರಬೇತಿ ಪಡೆದು ಮರಳಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆ ನಡೆದಾಗ ವಿದ್ಯಾರ್ಥಿನಿಯು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದರೂ ಸಂತೆಗೆ ಬಂದಂತಹ ಜನರು ಹೌಹಾರಿ ಅಯ್ಯೋ ಪಾಪ..... ಎಂದರಷ್ಟೆ ಯಾರು ವಿದ್ಯಾರ್ಥಿಯನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ ಅಂತಹವರಲ್ಲಿ ಅಲ್ಲೇ ತರಕಾರಿ ವ್ಯಾಪಾರ ಮಾಡಲು ಕುಳಿತ್ತಿದ್ದ ವ್ಯಕ್ತಿ ವಿದ್ಯಾರ್ಥಿಯನ್ನು ಹೆಗಲಮೇಲೆ ಹಾಕಿಕೊಂಡು ಕೂಗಳತೆಯ ದೂರದಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವಿತೆ ಮರೆದಿದ್ದಾನೆ ಎಂದು ಸಂತೆಗೆ ಬಂದಂತಹ ಜನರಿಂದ ಮಾತು ಕೇಳಿ ಬಂತು. ದುರ್ಘಟನೆ ಸಂಭವಿಸಿದಾಗ ಅಯ್ಯೋ ಪಾಪ ಎಂದು ಕನಿಕರ ತೋರಿದರೆ ಜೀವ ಉಳಿಯುವುದಿಲ್ಲ ಮಾನವಿತೆ ಮೆರೆದು ಆಸ್ಪತ್ರೆ ಸೇರಿಸುವ ಕಾರ್ಯ ಜನರಿಂದ ನಡೆಯಬೇಕು ಸೋಮವಾರದ ಸಂತೆಯಲ್ಲಿ ಕರೆಯದದೇ ಬರುವ ಬಿಡಾಡಿ ದನಗಳನ್ನು ನಿಯಂತ್ರಿಸುವಲ್ಲಿ ಪಟ್ಟಣ ಪಂಚಾಯತ ವ್ಯಾಪಾರಸ್ಥರ ಹಾಗು ಕೊಂಡುಕೊಳ್ಳುವ ಸಾರ್ವಜನಿಕರ ಹಿತಕಾಪಾಡಲು ವಿಫಲವಾಗಿರುವುದರಿಂದ ಸಂತೆ ದಿನ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಎಂದು ಹೇಳಲಾಗಿದೆ.