×
Ad

ಪೆರುವಾಜೆ ಬ್ರಹ್ಮಕಲಶೋತ್ಸವಕ್ಕೆ ವೈಭವಪೂರ್ಣ ಚಾಲನೆ

Update: 2016-04-06 18:20 IST

ಸುಳ್ಯ, : ಶ್ರೀ ಜಲದುರ್ಗಾದೇವೀ ದೇವಳದ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ, ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಜಾತ್ರೆ ಆರಂಭಗೊಂಡಿದೆ.

ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಬಳಿಯಿಂದ ಬುಧವಾರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶ್ಯಾನ್‌ಭಾಗ ಅವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋಹನದಾಸ ಸ್ವಾಮೀಜಿ, ಬ್ರಹ್ಮಕಲಶ, ಧ್ವಜಪ್ರತಿಷ್ಠೆ, ಜಾತ್ರೆ ಯಶಸ್ಸಿಯಾಗಿ ನೆರವೇರಲಿ. ಭಕ್ತ ಸಮುದಾಯದ ಸಮ್ಮಿಲನದೊಂದಿಗೆ ಈ ಕಾರ್ಯ ಸುಲಲಿತವಾಗಿ ನಡೆಯುವಂತಾಗಲಿ ಎಂದು ಹೇಳಿದರು.

ಪೂರ್ಣಕುಂಭ ಸ್ವಾಗತ, ಬ್ಯಾಂಡ್ ವಾದನ, ಗೊಂಬೆಕುಣಿತ ಮೊದಲಾದ ವೇಷ ಭೂಷಣಗಳು ಮೆರವಣಿಗೆಗೆ ಮೆರಗು ನೀಡಿತ್ತು. ಬೆಳ್ಳಾರೆ ಮುಖ್ಯ ಪೇಟೆಯ ಮೂಲಕ ಮಾಸ್ತಿಕಟ್ಟೆ ಮಾರ್ಗವಾಗಿ ಸುಮಾರು 3.5 ಕಿ.ಮೀ ದೂರದಲ್ಲಿನ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಸಾಗಿತ್ತು. ಪೆರುವಾಜೆ, ಬೆಳ್ಳಾರೆ, ಕೊಡಿಯಾಲ ಗ್ರಾಮಸ್ಥರು ಮತ್ತು ಪರವೂರಿನ ಭಕ್ತರು ಹಸಿರು ಹೊರೆಕಾಣಿಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಾಮೂಹಿಕ ಪ್ರಾರ್ಥನೆ:

ಆರಂಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅನಂತರ ಶ್ರೀ ಮೋಹನದಾಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ನಡೆಯಿತು.

ಈ ಸಂದರ್ಭದಲ್ಲಿ ಸಂಸದ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಗೌರವಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಮಿತಿ ಅಧ್ಯಕ್ಷ ಎಸ್.ಎನ್ ಮನ್ಮಥ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಕೆಎಂಬಿ, ಕ್ಷೇತ್ರೇಶ ಪೆರುವಾಜೆಗುತ್ತು ಅಮರನಾಥ ಶೆಟ್ಟಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಕೋಡಿಬೈಲು, ಕೋಶಾಕಾರಿ ಪಿ.ಮಂಜಪ್ಪ ರೈ, ಕಾರ್ಯದರ್ಶಿ ಎನ್.ಕುಶಾಲಪ್ಪ ಗೌಡ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಾಣ್ಣಾಯ, ಜತೆ ಕಾರ್ಯದರ್ಶಿಗಳಾದ ಪದ್ಮನಾಭ ಕೆ ನೆಟ್ಟಾರು, ರಾಮಕೃಷ್ಣ ರಾವ್ ಪೆರುವಾಜೆ, ಅರ್ಚಕ ಶ್ರೀನಿವಾಸ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ವೆಂಕಟಕೃಷ್ಣ ರಾವ್, ರಾಮಣ್ಣ ರೈ ವೈಪಾಲ, ದಾಮೋದರ ನಾಯ್ಕ, ಸುಜಾತ ಪದ್ಮನಾಭ ಶೆಟ್ಟಿ, ಭಾಮಿನಿ ಜತ್ತಪ್ಪ ಗೌಡ, ಅಜಪಿಲ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಸ್ವಾಗತ ಸಮಿತಿ ಸಹಸಂಚಾಲಕ ದೇವರಾಜ್ ಆಳ್ವ, ಆರ್ಥಿಕ ಸಮಿತಿ ಸಹಸಂಚಾಲಕ ಮಾಧವ ಗೌಡ ಕಾಮಧೇನು, ಪೆರುವಾಜೆ ಜಲದುರ್ಗಾದೇವಳದ ಮಾಜಿ ಮೊಕ್ತೇಸರ ಕುಂಬ್ರ ದಯಾಕರ ಆಳ್ವ, ಪ್ರದೀಪ್ ಕುಮಾರ್ ರೈ ಪನ್ನೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಪದ್ಮನಾಭ ಶೆಟ್ಟಿ ಪೆರುವಾಜೆ, ಸ್ವಯಂಸೇವಾ ಸಮಿತಿಯ ಜಯಪ್ರಕಾಶ್ ರೈ ಪೆರುವಾಜೆ, ರಾಜೇಶ್ ಶ್ಯಾನುಭಾಗ್, ರಾಮಚಂದ್ರ ಭಟ್ ಕೋಡಿಬೈಲು ಮೊದಲಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ, ಭಜನೆ, ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಧಾರ್ಮಿಕ ಕಾರ್ಯದಲ್ಲಿ ದೇವತಾ ಪ್ರಾರ್ಥನೆ, ವಾಸ್ತುಹೋಮ, ವಾಸ್ತುಪೂಜಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News