ಪರೀಕ್ಷೆ ಆಧಾರಿತ ಶಿಕ್ಷಣ ಪದ್ಧತಿ ಅಪಾಯಕಾರಿ: ಡಾ.ಅನಂತ್‌ರಾಜ್
ಉಡುಪಿ, ಎ.6: ಭಾರತದಲ್ಲಿರುವ ಪರೀಕ್ಷೆ ಆಧಾರಿತ ಶಿಕ್ಷಣ ಪದ್ಧತಿ ತೀರಾ ಅಪಾಯ ಕಾರಿಯಾಗಿದೆ. ಕೆನಡಾ, ತೈವಾನ್, ಚೀನಾ ಗಳಂತಹ ದೇಶಗಳಲ್ಲಿ ಪರೀಕ್ಷೆಗಿಂತ ಪ್ರೊಜೆಕ್ಟ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರೊಜೆಕ್ಟ್ ಆಧಾರಿತ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿಯೂ ಜಾರಿಗೆ ಬರಬೇಕಾಗಿದೆ ಎಂದು ಬೆಂಗಳೂರಿನ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ವಿಜನ್‌ಗ್ರೂಪ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಅನಂತ್‌ರಾಜ್ ಹೇಳಿದ್ದಾರೆ.
ಉಡುಪಿಯ ಕುತ್ಪಾಡಿ ಎಸ್‌ಡಿಎಂ ಆಯು ರ್ವೇದ ಕಾಲೇಜಿನ ವಿದ್ಯಾರ್ಥಿಗಳ ಪದವಿ ಪ್ರದಾನವನ್ನು ಮಂಗಳವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಅಧ್ಯಾಪಕರು ಕೋಣೆಯಲ್ಲಿ ಕುಳಿತು ಹೇಳುವುದನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರಿಗೆ ಪ್ರೊಜೆಕ್ಟ್‌ಗಳನ್ನು ನೀಡುವುದರಿಂದ ಅವರ ಜ್ಞಾನವನ್ನು ಹೆಚ್ಚಿಸಬಹುದು. ಕೆನಡಾ, ತೈವಾನ್‌ಗಳಲ್ಲಿ ತರಗತಿಗಳೇ ಇಲ್ಲ. ಲ್ಯಾಬೋಟರಿಯೇ ಅವರಿಗೆ ತರಗತಿಯಾಗಿದೆ. ಆರೋಗ್ಯ, ನೀರು ಸಹಿತ ವಿವಿಧ ವಿಷಯಗಳ ಮೇಲೆ ಅವರಿಗೆಪ್ರೊಜೆಕ್ಟ್‌ಗಳನ್ನು ನೀಡಲಾಗುತ್ತಿದೆ ಎಂದರು.
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಸ್ವಾಗತಿಸಿದರು. ಸ್ಟೂಡೆಂಟ್ ವೆಲ್ಫೇರ್‌ನ ಡೀನ್ ಡಾ. ಶ್ರೀನಿವಾಸ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳಿಧರ ಶರ್ಮ ವಂದಿಸಿದರು.