×
Ad

ಭಾರತದಲ್ಲಿ ಟ್ವಿಟರ್‌ಗಿಂತ ಫೇಸ್‌ಬುಕ್ ಹೆಚ್ಚು ಬಳಕೆ: ಅಧ್ಯಯನ ವರದಿ

Update: 2016-04-06 23:43 IST

ಹೊಸದಿಲ್ಲಿ, ಎ.6: ಭಾರತದ ಜನರು ಫೇಸ್‌ಬುಕ್ ಸಾಮಾಜಿಕ ಜಾಲತಾಣವನ್ನು ಮೈಕ್ರೊಬ್ಲಾಗಿಂಗ್ ತಾಣ ಟ್ವಿಟರ್‌ನ 2.4 ಪಟ್ಟು ಹಾಗೂ ವೀಡಿಯೊ ಹಂಚಿಕೆ ತಾಣ ಯೂಟ್ಯೂಬ್‌ನ ಎರಡು ಪಟ್ಟುಗಳಷ್ಟು ಬಳಸುತ್ತಿದ್ದಾರೆಂದು ಅಧ್ಯಯನವೊಂದು ಕಂಡು ಹಿಡಿದಿದೆ.

ಫೇಸ್‌ಬುಕ್ ಹಿಂಬಾಲಿಸುವಿಕೆ ನಿಜವಾಗಿ ಅಖಿಲ ಭಾರತ. ಅಗ್ರವಲ್ಲದ 8 ಮೆಟ್ರೊಗಳಲ್ಲಿ ಈ ವೇದಿಕೆಯಲ್ಲಿರುವ ಜನರ ಸಂಖ್ಯೆಯು ಅಗ್ರ 8 ನಗರಗಳ ಎರಡು ಪಟ್ಟಿದೆಯೆಂದು ಮಾರುಕಟ್ಟೆ ಸಂಶೋಧನೆ ಮತ್ತು ವ್ಯಾಪಾರ ಸಲಹಾ ಸಂಸ್ಥೆ ಐಎಂಆರ್‌ಬಿ ನಡೆಸಿರುವ ಅಧ್ಯಯನ ತಿಳಿಸಿದೆ.
ಫೇಸ್‌ಬುಕ್‌ನಲ್ಲಿರುವ ಶೇ. 70ರಷ್ಟು ಮಂದಿಯಲ್ಲಿ ಸ್ಮಾರ್ಟ್ ಫೋನ್‌ಗಳಿವೆ ಹಾಗೂ ಅವರಲ್ಲಿ ಶೇ.88ರಷ್ಟು ಮಂದಿ ಪೂರ್ವ ಪಾವತಿ ಸಂಪರ್ಕ ಪಡೆದಿರುತ್ತಾರೆಂದು ಅದು ಹೇಳಿದೆ.
ಎಂಡ್ರಾಯ್ಡಾ, ಫೇಸ್‌ಬುಕ್‌ನಲ್ಲಿ ಭಾರತೀಯರ ಅತ್ಯಂತ ಜನಪ್ರಿಯ ಕಾರ್ಯಾಚರಣೆ ವಿಧಾನವಾಗಿದೆ. ಆ ಬಳಿಕದ ಸ್ಥಾನಗಳು ಕ್ರಮವಾಗಿ ಐಒಎಸ್ ಹಾಗೂ ವಿಂಡೋಸ್‌ಗಳದಾಗಿವೆ.

ಭಾರತದಲ್ಲಿ ಫೇಸ್‌ಬುಕ್ ಉಪಯೋಗಿಸುವ ಸರಿಸುಮಾರು ಎಲ್ಲರೂ ಅಥವಾ ದೊಡ್ಡ ಬಹುಮತದ ಜನರು, ದಿಢೀರ್ ಸಂದೇಶ ಸೇವೆ, ವಾಟ್ಸ್‌ಆ್ಯಪನ್ನೂ ಉಪಯೋಗಿಸುತ್ತಾರೆ. ಭಾರತದಲ್ಲಿ ಫೇಸ್‌ಬುಕ್ ಬಳಸುವ ಶೇ.63 ಮಂದಿ 3ಜಿ ಸಂಪರ್ಕ ಪಡೆದಿದ್ದಾರೆ. ಶೇ. 38 ಮಂದಿ 2ಜಿ ಸಂಪರ್ಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News