ರಾಹುಲ್ ರಾಜ್‌ನನ್ನು ಗಲ್ಲಿಗೇರಿಸಬೇಕು: ಶಂಕರ್ ಬ್ಯಾನರ್ಜಿ
Update: 2016-04-06 23:46 IST
ಮುಂಬೈ,ಎ.6: ಟೆಲಿವಿಜನ್ ತಾರೆ ಪ್ರತ್ಯೂಷಾ ಬ್ಯಾನರ್ಜಿಯ ಬಾಳನ್ನು ಹಾಳುಗೆಡವಿದ ಆಕೆಯ ಪ್ರಿಯತಮ, ನಟ ರಾಹುಲ್ ರಾಜ್‌ಸಿಂಗ್‌ನನ್ನು ಗಲ್ಲಿಗೇರಿಸ ಬೇಕು ಅಥವಾ ಉಳಿದ ಜೀವಮಾನ ಪೂರ್ತಿ ಕಾರಾಗೃಹ ಶಿಕ್ಷೆ ನೀಡಬೇಕೆಂದು ನಟಿಯ ತಂದೆ ಶಂಕರ್ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
ರಾಹುಲ್‌ನನ್ನು ಗಲ್ಲಿಗೇರಿಸಬೇಕು ಅಥವಾ ಪೂರ್ತಿ ಜೀವಾವಧಿ ಶಿಕ್ಷೆ ವಿಧಿಸಬೇಕು. ಆತ ತನ್ನ ಮಗಳ ಬಾಳನ್ನು ನಾಶಗೊಳಿಸಿದ. ಆಕೆಗೆ ನ್ಯಾಯಸಿಗಲೇ ಬೇಕೆಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
‘ಬಾಲಿಕಾ ವಧು’ ಧಾರಾವಾಹಿಯ ಆನಂದಿ ಪಾತ್ರದಿಂದ ಖ್ಯಾತರಾಗಿದ್ದ ಪ್ರತ್ಯೂಷಾರಿಗಾಗಿ ಪ್ರಾರ್ಥನಾ ಸಭೆಯೊಂದನ್ನು ಮಂಗಳವಾರ ಸಂಘಟಿಸಲಾಗಿತ್ತು. ಮುಂಬೈಯ ಗುರುದ್ವಾರವೊಂದರಲ್ಲಿ ನಡೆದ ಈ ಸಭೆಯಲ್ಲಿ ಆಕೆಯ ತಂದೆ-ತಾಯಿ ಹಾಗೂ ನಿಕಟ ಸ್ನೇಹಿತರು ಭಾಗವಹಿಸಿದ್ದರು.