ಪಠಾಣ್ ಕೋಟ್ ದಾಳಿ ಭಯೋತ್ಪಾದಕರಿಗೆ ಅಝರ್ ನಿಯಂತ್ರಕ
Update: 2016-04-06 23:47 IST
ಹೊಸದಿಲ್ಲಿ, ಎ.6: ಜೈಶೆ ಮುಹಮ್ಮದ್ ನಾಯಕ ಮಸೂದ್ ಅಝರ್ ಪಠಾಣ್ ಕೋಟ್ ವಾಯು ನೆಲೆಗೆ ದಾಳಿ ನಡೆಸಿದ್ದ ಭಯೋತ್ಪಾದಕರಲೊಬ್ಬನ ನಿಯಂತ್ರಿಕನಾಗಿದ್ದನು. ಆತನ ಸಂಘಟನೆಯು ತಾಲಿಬಾನ್‌ನಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿದೆಯೆಂದು ಭಾರತವು ವಿಶ್ವ ಸಂಸ್ಥೆಗೆ ತಿಳಿಸಿದೆ.
ವಿಶ್ವಸಂಸ್ಥೆಯಲ್ಲಿ ಅಝರ್‌ನನ್ನು ಭಯೋತ್ಪಾದಕನೆಂದು ಘೋಷಿಸುವಂತೆ ನಡೆಸಿದ್ದ ವಿಫಲ ಪ್ರಯತ್ನದಲ್ಲಿ ಭಾರತ, ಅವನು ಹಾಗೂ ಆತನ ಜೆಇಎಂ ಭಯೋತ್ಪಾದಕ ಸಂಘಟನೆ ಭಾರತದ ವಿರುದ್ಧ ಸತತವಾಗಿ ಭಯೋತ್ಪಾದನಾ ದಾಳಿಗಳನ್ನು ರೂಪಿಸುತ್ತಿದೆ. ಜನವರಿಯ ಪಠಾಣ್ ಕೋಟ್ ದಾಳಿಯು ಇತ್ತೀಚಿನದಾಗಿದೆಯೆಂದು ಮಾಹಿತಿ ನೀಡಿತ್ತು.
ಜೆಇಎಂಗೆ ಸೇರಿದ್ದ ಭಯೋತ್ಪಾದಕರು ದಾಳಿಯ ರೂವಾರಿಗಳಾಗಿದ್ದರು. ಅಝರ್ ಸಹಿತ ಜೆಇಎಂನ ಹಿರಿಯ ನಾಯಕರು ಭಯೋತ್ಪಾದಕರ ನಿಯಂತ್ರಕರಾಗಿದ್ದರೆಂಬುದಕ್ಕೆ ವಿಶ್ವಸಾರ್ಹ ಸಾಕ್ಷಗಳು ಲಭ್ಯವಾಗಿದೆಯೆಂದು ಅದು ಹೇಳಿತ್ತು.