×
Ad

ಸೈಬರ್ ಅಪರಾಧ ಪತ್ತೆ ಬಗೆಗಿನ ಕಾರ್ಯಾಗಾರ

Update: 2016-04-06 23:47 IST

ಮಂಗಳೂರು, ಎ.6: ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಾಹಿತಿ ತಂತ್ರಜ್ಞಾನ ತಾಂತ್ರಿಕತೆಯನ್ನು ಎಚ್ಚರಿಕೆಯಿಂದ ಬಳಕೆ ಮಾಡಬೇಕು ಎಂದು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಹೇಳಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳವಾರ ಸೈಬರ್ ಅಪರಾಧ ಪತ್ತೆ ಬಗೆಗಿನ ಕಾರ್ಯಾಗಾರದ ಸಮಾ ರೋಪದಲ್ಲಿ ಅವರು ಮಾತನಾಡಿದರು. ಶೇ.75ರಷ್ಟು ಸೈಬರ್ ಪ್ರಕರಣಗಳು ಗ್ರಾಹಕರ ನಿರ್ಲಕ್ಷದಿಂದ ಸಂಭ ವಿಸುತ್ತವೆ. ಪೊಲೀಸ್ ಇಲಾಖೆಯಲ್ಲಿ ಸಾಧ್ಯವಾಗದ ಸೈಬರ್ ಅಪರಾಧ ಪ್ರಕರಣಗಳನ್ನು ಸಿಡಾಕ್ ಸಂಸ್ಥೆಯ ಮುಖೇನ ಪತ್ತೆ ಮಾಡುತ್ತೇವೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾದರೂ ಇದ ರಿಂದ ಮಾಹಿತಿ ಪಡೆದುಕೊಳ್ಳಲು ಸಾಧ್ಯ ವಾಗುತ್ತದೆ ಎಂದರು. ಜಿಲ್ಲಾ ಎಸ್ಪಿ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಆನ್‌ಲೈನ್ ವಂಚನೆ, ಮೊಬೈಲ್ ಬ್ಯಾಂಕಿಂಗ್ ವಂಚನೆ, ಕೆಲವು ಆಮಿಷಗಳನ್ನೊಡ್ಡುವ ಮೊಬೈಲ್ ಕರೆಗಳ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕು.ಈ ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸವಾ ಲಾಗಿದೆ. ಗ್ರಾಹಕರು ತಮ್ಮ ಪಾಸ್‌ವರ್ಡ್‌ಗಳನ್ನು ಇತರರಿಗೆ ತಿಳಿಸಬಾರದು ಎಂದರು.

ಇದೇ ಸಂದರ್ಭ ಸೈಬರ್ ಕ್ರೈಂ ಬಗ್ಗೆ ಮಾಹಿತಿಯನ್ನೊಳಗೊಂಡ ಸೈಬರ್ ಕ್ರೈಂ ಜಾಗೃತಿ ಆಂದೋಲನದ ಪೋಸ್ಟರನ್ನು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಬಿಡುಗಡೆ ಮಾಡಿದರು.

ಹೈದರಾಬಾದ್ ಸಿಡಾಕ್‌ನ ಎ.ಎಸ್.ಮೂರ್ತಿ, ನರಸಿಂಹ ರಾವ್, ಸುರತ್ಕಲ್ ಎನ್‌ಐಟಿಕೆಯ ಡಾ.ಆಲ್ವಿನ್ ಪಾಯಸ್, ಡಾ.ಶಾಂತ ತಿಂಗಳಂ, ಡಿಸಿಪಿಗಳಾದ ಶಾಂತಕುಮಾರ್, ಡಾ.ಸಂಜೀವ ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News