ತೊಕ್ಕೊಟ್ಟು: ಸೂಪರ್ಸ್ ಹಾಜಿ ಗೋಲ್ಡ್ ಎಂಡ್ ಡೈಮಂಡ್ಸ್ ಶುಭಾರಂಭ
ಉಳ್ಳಾಲ, ಎ. 7: ತೊಕ್ಕೊಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಜಿನಸು ವ್ಯಾಪಾರದಲ್ಲಿ ಪ್ರಸಿದ್ಧಗೊಂಡಿರುವ ಸೂಪರ್ ಬಝಾರ್ ಮತ್ತು ಚಿನ್ನಾಭರಣದಲ್ಲಿ ಮನೆ ಮಾತಾಗಿರುವ ಹಾಜಿ ಗೋಲ್ಡ್ ಜಂಟಿಯಾಗಿ ಆರಂಭಿಸಿರುವ ಚಿನ್ನಾಭರಣ ಮಳಿಗೆ ಸೂಪರ್ಸ್ ಹಾಜಿ ಗೋಲ್ಡ್ ಎಂಡ್ ಡೈಮಂಡ್ಸ್ ಗುರುವಾರ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಗಂಗಾ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ನೂತನ ಚಿನ್ನಾಭರಣ ಮಳಿಗೆಯನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ವಿಶ್ವಾಸಾರ್ಹತೆ, ಪ್ರಾಮಾಣಿಕತೆ, ಬದ್ಧತೆಯಿಂದ ವ್ಯಾಪಾರ ನಡೆಸಿ ಜನಸಾಮಾನ್ಯರಿಗೆ ಗುಣಮಟ್ಟದ ಸೇವೆ ನೀಡಿದಾಗ ಸಂಸ್ಥೆ ಯಶಸ್ವಿಯಾಗಲು ಸಾಧ್ಯ. ಕಳೆದ ಹಲವು ವರ್ಷಗಳಿಂದ ಸೂಪರ್ ಬಝಾರ್ ಮೂಲಕ ಜನರ ವಿಶ್ವಾಸ ಗಳಿಸಿರುವ ಸೂಪರ್ ಸಮೂಹ ಮತ್ತು ಕಳೆದ ಒಂದು ವರ್ಷದಿಂದ ಹಾಜಿ ಗೋಲ್ಡ್ ಮೂಲಕ ಜನರ ಪ್ರೀತಿ ವಿಸ್ವಾಸಕ್ಕೆ ಪಾತ್ರವಾಗಿರುವ ಹಾಜಿ ಗೋಲ್ಡ್ ಸಮೂಹ ಮುಂದಿನ ದಿನಗಳಲ್ಲಿ ಜಂಟಿಯಾಗಿ ಯಶಸ್ವಿಯಾಗಲಿದೆ ಎಂದರು.
ಮಳಿಗೆಯ ಪಾಲುದಾರರಾಗಿರುವ ಸೂಪರ್ ಬಝಾರ್ ಸಮೂಹದ ಟಿ. ಎಂ. ಬಾವ ಮಾತನಾಡಿ ಸೂಪರ್ಸ್ ಹಾಜಿ ಗೋಲ್ಡ್ ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಲು ಸನ್ನದ್ಧವಾಗಿದ್ದು, ಕರಾವಳಿ ಜನರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣವನ್ನು ನೂತನ ಮಳಿಗೆಯಲ್ಲಿ ಸಂಗ್ರಹಿಸಿಡಲಾಗಿದೆ ಎಂದರು.
ಇನ್ನೊರ್ವ ಪಾಲುದಾರರಾದ ಹಾಜಿ ಗೋಲ್ಡ್‌ನ ಮುಹಮ್ಮದ್ ಶಹಾಬುದ್ಧೀನ್ ಮತ್ತು ನದೀಂ ಪಿಲಾರ್ ಮಾತನಾಡಿ ದೇಶದಾದ್ಯಂತ ಇರುವ ವಜ್ರಾಭರಣ ಮತ್ತು ಚಿನ್ನಾಭರಣಗಳ ಸಂಗ್ರಹ ಈ ಮಳಿಗೆಯಲ್ಲಿದ್ದು, ಗ್ರಾಹಕರಿಗೆ ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿನ್ನಾಭರಣ ನೀಡಲು ಸಂಸ್ಥೆ ಸಿದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಾಜಿ ಗೋಲ್ಡ್‌ನ ಮುಹಮ್ಮದ್ ಶಹಾಬುದ್ಧೀನ್, ಮುಹಮ್ಮದ್ ನದೀಂ, ಇಸ್ಮಾಯೀಲ್ ನಾಗತೋಟ, ಅಬ್ದುಲ್ ರಶೀದ್ ಪಿಲಾರ್, ಸೂಪರ್ ಬಝಾರ್ ಸಮೂಹದ ಹಸನಬ್ಬ, ಸೀದಿಯಬ್ಬ (ಮೋನಾಕ), ತಯ್ಯೂಬ್ ಹಾಜಿ, ಮುಹಮ್ಮದ್ ಖಲಂದರ್, ಫೈಝಲ್ ಹಾಗೂ ಇತರರು ಉಪಸ್ಥಿತರಿದ್ದರು.