ಎ.17: ಮುಂಡಗೋಡ ಪಟ್ಟಣ ಪಂಚಾಯತ್ 2ನೆ ವಾರ್ಡಿಗೆ ಉಪಚುನಾವಣೆ
ಮುಂಡಗೋಡ, ಎ. 7 : ಮುಂಡಗೋಡ ಪಟ್ಟಣ ಪಂಚಾಯತ್ ನ ಎರಡನೇ ವಾರ್ಡಗೆ ಉಪಚುನಾವಣೆ ಎ.17 ರಂದು ನಡೆಯಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಐದು ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರಸಲ್ಲಿಸಲು ಬುಧವಾರ ಕೊನೆ ದಿನವಾಗಿತ್ತು. ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಲತೀಫ್ ಬಾಬಾಜಾನ ನಾಲಬಂದ, ಜೆಡಿಎಸ್ ದಿಂದ ಮುಹಮ್ಮದ್ ಹಸನ ನೂರಹ್ಮದ್ ಶೇಖ್, ಪಕ್ಷೇತರರಾಗಿ ರಬ್ಬಾನಿ ಮುರ್ತುಜಾ ಪಟೇಲ, ಇಬ್ರಾಹೀಂ ನೂರಹ್ಮದ್ ಶೇಖ್, ಮುಹಮ್ಮದ್ ಶಾಹೀದ ಕಾಸೀಮ ಮಿರ್ಜಾನಕರ, ಅನ್ವರ್ ಖಾನ್ ಪಠಾಣ, ಮತ್ತು ಅಬ್ದುಲ್ ಹುಸೇನ ನಂದಿಗಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.
ಎ. 9ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎ. 17 ರಂದು ಚುನಾವಣೆ ನಡೆಯಲಿದೆ.
ಪಟ್ಟಣ ಪಂಚಾಯತ್ ಸದಸ್ಯ ಮುಹಮ್ಮದ್ ಹುಸೈಸ್ ಮುಲ್ಲಾ ಕೆಲ ತಿಂಗಳಗಳ ಹಿಂದೆ ಮೃತಪಟ್ಟಿರುವ ಕಾರಣದಿಂದ ಎರಡನೆ ವಾರ್ಡಿಗೆ ಉಪಚುನಾವಣೆ ನಡೆಯಲಿದೆ.