×
Ad

ಉಪ್ಪಿನಂಗಡಿ: ಪೊಲೀಸ್ ತರಬೇತಿ ಮೈದಾನಕ್ಕಾಗಿ ಉಪ್ಪಿನಂಗಡಿಯ ಮಠ ಬಳಿಯ ಹಿರ್ತಡ್ಕದಲ್ಲಿರುವ ಸರಕಾರಿ ಜಾಗದ ಪರಿಶೀಲನೆ

Update: 2016-04-07 18:46 IST

ಉಪ್ಪಿನಂಗಡಿ: ಪೊಲೀಸ್ ಇಲಾಖೆಯ ಕೋರಿಕೆಯಂತೆ ಪೊಲೀಸ್ ತರಬೇತಿ ಮೈದಾನಕ್ಕಾಗಿ ಉಪ್ಪಿನಂಗಡಿಯ ಮಠ ಬಳಿಯ ಹಿರ್ತಡ್ಕದಲ್ಲಿರುವ ಸರಕಾರಿ ಜಾಗವನ್ನು ಗುರುವಾರ ಪರಿಶೀಲನೆ ನಡೆಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಇಲ್ಲಿ ಆರ್‌ಟಿಸಿ ಪ್ರಕಾರ 30 ಎಕ್ರೆ ಸರಕಾರಿ ಜಾಗವಿದೆ. ಅದರಲ್ಲಿ 94ಸಿಯಡಿ, ರಾಷ್ಟ್ರೀಯ ಹೆದ್ದಾರಿಗೆ ಹಾಗೂ ಅರಣ್ಯ ಇಲಾಖೆಯವರ ಅಕೇಶಿಯಾ ಪ್ಲಾಂಟೇಶನ್‌ಗೆ ಜಾಗ ಹೋಗಿರುವ ಸಾಧ್ಯತೆ ಇದೆ. ಅಲ್ಲದೇ, ಈಗಾಗಲೇ ಇದೇ ಜಾಗದಲ್ಲಿ ಒಂದೂವರೆ ಎಕ್ರೆ ಜಾಗವನ್ನು ಮೆಸ್ಕಾಂ ಇಲಾಖೆಯವರಿಗೆ ಸಬ್‌ಸ್ಟೇಶನ್ ನಿರ್ಮಿಸಲು ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಎಕ್ರೆ ಜಾಗವನ್ನು ಹಿರ್ತಡ್ಕ ಸರಕಾರಿ ಶಾಲಾ ಮೈದಾನಕ್ಕೆ ನೀಡಬೇಕೆಂದು ಶಾಲಾಭಿವೃದ್ಧಿ ಸಮಿತಿಯಿಂದ ಕೋರಿಕೆ ಸಲ್ಲಿಸಲಾಗಿದೆ. ಈ ಸ್ಥಳದ ಅಳತೆ ಕಾರ್ಯ ನಡೆಸಿದ ಬಳಿಕ ಮಾತ್ರ ಇಲ್ಲಿ ಎಷ್ಟು ಜಾಗ ಈಗ ಉಳಿದಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯ.

  ಸರಕಾರಿ ಸ್ಥಳ ಪರಿಶೀಲನಾ ಸಂದರ್ಭ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿರುವ ಪ್ರೊಬೆಷನರಿ ಎಎಸ್ಪಿ ಲಕ್ಷಣ್ ನಿಂಬರ್ಗಿ, ಕಂದಾಯ ನಿರೀಕ್ಷಕ ಮಂಜುನಾಥ್ ಹಾಗೂ ಗ್ರಾಮಕರಣಿಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಠಾಣಾ ಬರಹಗಾರ ಮನೋಹರ್, ಗ್ರಾಮ ಸಹಾಯಕ ಯತೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News