ಉಡುಪಿ: ನೇಪಾಳ ಮೂಲದ ಬಾಲಕಾರ್ಮಿಕನ ಪತ್ತೆ
ಉಡುಪಿ, ಎ.7: ಸಾರ್ವಜನಿಕರು ಚೈಲ್ಡ್‌ಲೈನ್‌ಗೆ ನೀಡಿದ ದೂರಿನ ಹಿನ್ನೆಲೆ ಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಮಣಿಪಾಲದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತಿದ್ದ ನೇಪಾಳ ಮೂಲದ ಸುಮಾರು 13 ವರ್ಷ ಪ್ರಾಯದ ಪ್ರಸಾದ್ (ಹೆಸರು ಬದಲಾಯಿಸಿದೆ)ನನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಉಡುಪಿ, ಎ.7: ಸಾರ್ವಜನಿಕರು ಚೈಲ್ಡ್‌ಲೈನ್‌ಗೆ ನೀಡಿದ ದೂರಿನ ಹಿನ್ನೆಲೆ ಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಮಣಿಪಾಲದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತಿದ್ದ ನೇಪಾಳ ಮೂಲದ ಸುಮಾರು 13 ವರ್ಷ ಪ್ರಾಯದ ಪ್ರಸಾದ್ (ಹೆಸರು ಬದಲಾಯಿಸಿದೆ)ನನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಬಾಲಕನ ತಾತ್ಕಾಲಿಕ ಪುನರ್ವಸತಿಗಾಗಿ ಶಂಕರಪುರದಲ್ಲಿರುವ ವಿಶ್ವಾಸದ ಮನೆಯ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಉಡುಪಿ ಒಂದನೇ ವೃತ್ತದ ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಎಸ್.ಎಸ್, ಎರಡನೇ ವೃತ್ತದ ಕಾರ್ಮಿಕ ನಿರೀಕ್ಷಕ ಕೆ. ಎಚ್. ಜೀವನ್‌ಕುಮಾರ್ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್ ಇದ್ದರು.