ಕೈಯಲ್ಲಿ ಮೊಬೈಲ್ ನಿಂದಾಗಿ ಎಂ ಎಲ್ ಎ ಟಿಕೆಟ್ ಕೈ ತಪ್ಪಿತು !
ಚೆನ್ನೈ, ಎ. 7: 'ಅಮ್ಮ'ನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಟಿಕೆಟ್ ಪಡೆಯುವುದೇ ಎಐಎಡಿಎಂಕೆ ಯಲ್ಲಿ ಬಹುದೊಡ್ಡ ಸಾಧನೆ. ಅಷ್ಟು ಮಾಡಲು ಸರತಿ ಸಾಲಲ್ಲಿ ಬಂದು ನಿಲ್ಲುವವರು ಅದೆಷ್ಟೋ ಜನರಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಏನೆಲ್ಲಾ ಪಾಡು ಪಟ್ಟು ಪಡೆದ ಟಿಕೆಟನ್ನು ಕೊನೆಗಳಿಗೆಯಲ್ಲಿ ಕಳಕೊಂಡರೆ ಹೇಗಾಗಬೇಡ ? ಅದೂ ಯಾವತ್ತೋ ಮಾಡಿದ್ದಾನೆ ಎಂದು ಹೇಳಲಾದ ತಪ್ಪಿಗೆ !
ಪಮ್ಮಾಳ್ ಮುನಿಸಿಪಾಲಿಟಿ ಅಧ್ಯಕ್ಷ ಸಿವಿ ಇಳಂಗೋವನ್ ಈ ನತದೃಷ್ಟ ಅಭ್ಯರ್ಥಿ. ಕೊನೆಗಳಿಗೆಯಲ್ಲಿ ಅವರ ಹೆಸರನ್ನು ಬಿಟ್ಟು ಪಕ್ಷದ ವಕ್ತಾರ ಸಿ ಆರ್ ಸರಸ್ವತಿ ಅವರಿಗೆ ಪಲ್ಲಾವರಂ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇದಕ್ಕೆ ಕಾರಣ ಒಂದು ಫೋಟೋ. 2014 ರಲ್ಲಿ ಇಳಂಗೋವನ್ ರಾಷ್ಟ್ರ ಧ್ವಜಾರೊಹಣ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿರುವ ಚಿತ್ರ ಈಗ ಇದ್ದಕ್ಕಿದ್ದಂತೆ ವೈರಲ್ ಆಗಿದೆ. ಇದೇ ಕಾರಣಕ್ಕಾಗಿ ಟಿಕೆಟ್ ಅವರ ಕೈ ತಪ್ಪಿದೆ.
ಮಾಜಿ ಸರಕಾರೀ ವಕೀಲರೂ ಆಗಿರುವ ಇಳಂಗೋವನ್ ನಾನು ಧ್ವಜಾರೋಹಣಮಾಡಿಲ್ಲ . ನಾನು ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗ ಶಿಕ್ಷಕರೊಬ್ಬರು ನನ್ನ ಕೈಗೆ ಧ್ವಜಾರೋಹಣ ಮಾಡುವ ಹಗ್ಗ ಕೊಟ್ಟರು. ನಾನು ಅದನ್ನು ಅವರಿಗೆ ಹಿಂದುರುಗಿಸಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಈಗ ಬಹಳ ತಡವಾಗಿದೆ. ಟಿಕೆಟ್ ಕೈ ತಪ್ಪಿದೆ !