×
Ad

ಕೊಂಬಾರು ಶಾಲಾ ವಜ್ರಮಹೋತ್ಸವ ಸಂಭ್ರಮ

Update: 2016-04-07 23:29 IST

ಕಡಬ, ಎ.7: ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ಭಾರತ ದೇಶ ಭದ್ರವಾಗಿದೆ. ಇದಕ್ಕೆ ಹಿಂದಿನಿಂದಲೂ ಬಂದ ದೇಶದ ಸಾಂಸ್ಕೃತಿಕ ಪರಂಪರೆಯೇ ಕಾರಣವಾಗಿದೆ ಎಂದು ಶಾಸಕ ಎಸ್. ಅಂಗಾರ ಹೇಳಿದರು. ಕೊಂಬಾರು ಉ.ಹಿ.ಪ್ರಾ.ಶಾಲೆಯ ವಜ್ರಮಹೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ವರ್ಲಿ ಚಿತ್ರ ಅನಾವರಣ ಮಾಡಿದ ಮಾಜಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಡಬ ಜಿಪಂ ಸದಸ್ಯ ಪಿ.ಪಿ.ವರ್ಗೀಸ್, ಮಾಜಿ ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿದರು.ನಿವೃತ್ತ ಉಪನ್ಯಾಸಕ ಎನ್. ಪದ್ಮನಾಭ ಗೌಡ ರಂಗಮಂದಿರ ಉದ್ಘಾಟಿಸಿದರು. ಕೊಂಬಾರು ಗ್ರಾಪಂ ಅಧ್ಯಕ್ಷ ಅಜಿತ್, ಸಭೆಯ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಸದಸ್ಯೆ ಆಶಾ ಲಕ್ಷ್ಮಣ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಜ್ರಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲಪ್ಪಗೌಡ ಕೈಕುರೆ, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ರಾಜ್ಯ ಪ್ರಾ.ಶಾ.ಶಿ. ಸಂ.ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಮಾತನಾಡಿದರು.

ಪ್ರಗತಿಪರ ಕೃಷಿಕ ಹರಿಯಪ್ಪ ಗೌಡ ಪುತ್ತಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕಮರ್ಕಜೆ, ತಾಯಂದಿರ ಪರಿಷತ್ ಅಧ್ಯಕ್ಷೆ ಮೀನಾಕ್ಷಿ ಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಕಾಯರ್ತಡ್ಕ ವೇದಿಕೆಯಲ್ಲಿ ಉಪಸ್ಥಿ ತರಿದ್ದರು. ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪಗೌಡ ಬೀಡುಮಜಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಚಿದಾನಂದ ಗೌಡ.ಕೆ ಸ್ವಾಗತಿಸಿ, ವರದಿ ವಾಚಿಸಿದರು. ಗೋವಿಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News