×
Ad

ಇಂದಿನಿಂದ ಪಡುಬಿದ್ರೆಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್

Update: 2016-04-07 23:57 IST

ಪಡುಬಿದ್ರೆ, ಎ.7: ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರೆ ಬೋರ್ಡ್ ಶಾಲಾ ಮೈದಾನದಲ್ಲಿ ಎ.8ರಿಂದ 10ರತನಕ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಕೂಟ ‘ವೆಂಕಟೇಶ್ ಟ್ರೋಫಿ- 2016’ ನಡೆಯಲಿದೆ.


ಕ್ಲಬ್‌ನ 35ನೆ ವರ್ಷಾಚರಣೆ ಅಂಗವಾಗಿ ನಡೆಯಲಿರುವ ಈ ಪಂದ್ಯ ಕೂಟವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸುವರು. ಈ ಪಂದ್ಯಾವಳಿಯಲ್ಲಿ ಆಯ್ದ 30 ತಂಡಗಳು ಭಾಗವಹಿಸಲಿದ್ದು, ಪ್ರಥಮ ವಿಜೇತರಿಗೆ 3,03,333 ರೂ. ಹಾಗೂ ರನ್ನರ್ ಅಪ್‌ಗೆ 1,50,555 ರೂ. ಸಹಿತ ಶಾಶ್ವತ ಫಲಕ ನೀಡಲಾಗುವುದು. ರಾಜ್ಯಾದ್ಯಂತ ಪಂದ್ಯಕೂಟದ ಟಿವಿ ನೇರ ಪ್ರಸಾರವಿರಲಿದೆ. ಎ.10ರಂದು ನಡೆಯುವ ಸಮಾ ರಂಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶಸ್ತಿ ವಿತರಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News