×
Ad

ಕನ್ಹಯ್ಯಾ ಸತ್ಯಘಟನೆ ಬಗ್ಗೆ ಕರಪತ್ರ ಹಂಚುವ ಕಾರ್ಯಕ್ರಮ: ತುಮಕೂರಿಗೆ ಮಂಗಳೂರಿನಿಂದ ಸಿಪಿಐ ತಂಡ

Update: 2016-04-08 15:23 IST

ಮಂಗಳೂರು,ಎ.8: ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಗೆ ಸಂಬಂಧಿಸಿ ಅಂದು ನಡೆದ ಸತ್ಯ ಘಟನೆಯ ಬಗ್ಗೆ ಕರಪತ್ರವನ್ನು ಹಂಚುತ್ತಿದ್ದ ಎಐಎಸ್ ಎಫ್ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಎ.14 ರಂದು ತುಮಕೂರಿನಲ್ಲಿ ಬೃಹತ್ ರೀತಿಯಲ್ಲಿ ಕರಪತ್ರ ಹಂಚಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು ಆ ಪ್ರಯುಕ್ತ ಮಂಗಳೂರಿನಿಂದ ತಂಡವೊಂದು ಎ.13 ರಂದು ತುಮಕೂರಿಗೆ ತೆರಳಲಿದೆ.

ಕನ್ಹಯ್ಯಾ ಕುಮಾರ್ ಸತ್ಯ ಘಟನೆಯ ಬಗ್ಗೆ ಇತ್ತೀಚೆಗೆ ಎಐಎಸ್‌ಎಫ್ ಕಾರ್ಯಕರ್ತರು ತುಮಕೂರಿನಲ್ಲಿ ಕರಪತ್ರ ಹಂಚುತ್ತಿದ್ದ ವೇಳೆ ಎಬಿವಿಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿ ,ಅವರ ವಿರುದ್ದ ಸುಳ್ಳು ಮೊಕದ್ದಮ್ಮೆ ದಾಖಲಿಸಿದ್ದರು.

ಘಟನೆ ನಡೆದು ಹಲವು ದಿನಗಳಾದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲದೆ ಇರುವುದರಿಂದ ಸಿಪಿಐ ಮತ್ತು ಎಐಟಿಯುಸಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕರಪತ್ರ ಹಂಚಲು ತೀರ್ಮಾನಿಸಿರುತ್ತಾರೆ.

ಆ ಪ್ರಕಾರ ಮಂಗಳೂರಿನಿಂದ ತಂಡವು ತುಮಕೂರಿಗೆ ತೆರಳಿ ಕರಪತ್ರ ಹಂಚುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ. ಸಿಪಿಐ ,ಎಐಟಿಯುಸಿ,ಎಐವೈಎಫ್, ಎಐಎಸ್‌ಎಫ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News