ಮಂಗಳೂರು : ಬೀಡಿ ಉತ್ಪಾದನೆ ಸ್ಥಗಿತ, ಕೋಟ್ಯಂತರ ಕಾರ್ಮಿಕರು ಬೀದಿಪಾಲು
ಮಂಗಳೂರು, ಎ. 8: ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಮೇಲಿನ ಎಚ್ಚರಿಕೆ ಗ್ರಾಫಿಕ್, ಪ್ಯಾಕೆಟ್ ಗಾತ್ರದ ಶೇ.85ರಷ್ಟಿರಬೇಕು ಎಂದು ಕೇಂದ್ರ ಸರಕಾರ ಕಡ್ಡಾಯ
ಮಾಡಿರುವುದರಿಂದ ದೇಶದಲ್ಲಿ ಬೀಡಿ ಉದ್ಯಮ ಖಾಯಂ ಮುಚ್ಚುಗಡೆಯಾಗುವ ಅಪಾಯ ಎದುರಿಸುತ್ತಿದೆ ಎಂದು ಆಲ್ ಇಂಡಿಯಾ ಬೀಡಿ ಇಂಡಸ್ಟ್ರಿ ೆಡರೇಶನ್ ಆತಂಕವ್ಯಕ್ತಪಡಿಸಿದೆ.
ದೇಶದಲ್ಲಿ ಕೋಟ್ಯಂತರ ಬೀಡಿ ಕಾರ್ಮಿಕರು ಹಾಗೂ ತಂಬಾಕು ಬೆಳೆಗಾರರ ಜೀವನಾಧಾರವನ್ನೇ ಕಸಿದುಕೊಳ್ಳುವ ಇಂತಹ ‘ತಂಬಾಕು ವಿರೋಧಿ ನೀತಿ’ಯನ್ನು ತತ್‌ಕ್ಷಣದಿಂದ ಕೈಬಿಡಬೇಕು. ಇಲ್ಲವಾದರೆ ಬೀಡಿ ಕಾರ್ಮಿಕರಿಗೆ ಕಡ್ಡಾಯವಾಗಿ ಪರ್ಯಾಯ ಜೀವನಾಧಾರ ಕಲ್ಪಿಸಬೇಕು ಎಂದು ೆಡರೇಶನ್ ಕೇಂದ್ರ ಸರಕಾರವನ್ನುಆಗ್ರಹಿಸಿದೆ.
ಕೃಷಿ, ಕೈಗಾರಿಕೆಯ ಅನಂತರ ಬೀಡಿ ಉದ್ಯಮವು ಭಾರತದ ಬಹುದೊಡ್ಡ ಉದ್ಯೋಗ ಕ್ಷೇತ್ರವಾಗಿದೆ. ಹಳ್ಳಿಯ ಮೂಲೆ ಮೂಲೆಯ ಸುಮಾರು 80 ಲಕ್ಷ ಜನರಿಗೆ
ಬೀಡಿಯೇ ಜೀವನೋಪಾಯವಾಗಿದೆ. 5 ಲಕ್ಷ ಜನರು ಬೀಡಿಪ್ಯಾಕ್ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ. ಸುಮಾರು 2 ಕೋಟಿಯಷ್ಟು ಜನರು ಬೀಡಿ ಉದ್ಯಮವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದಾರೆ. ಹೀಗೆ ದೇಶವ್ಯಾಪಿ
ಸರ್ವ ರೀತಿಯಲ್ಲಿ ಜನರ ಜೀವನಾಧಾರವಾಗಿರುವ ಬೀಡಿ ಉದ್ಯಮಕ್ಕೆ ಇದೀಗ ವಿವಿಧ ನೀತಿಗಳನ್ನು ತರುವ ಮೂಲಕ ಕೇಂದ್ರ ಸರಕಾರವು ಅನ್ಯಾಯ ನಡೆಸುತ್ತಿದೆ ಎಂದು ೆಡರೇಶನ್ ಆರೋಪಿಸಿದೆ.
ಇದೀಗ ಬಂದಿರುವ ಕೋಟ್ಪಾದಂತಹ ಕಾನೂನಿನಿಂದಾಗಿ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲಿನ ಎಚ್ಚರಿಕೆ ಗ್ರಾಫಿಕ್, ಪ್ಯಾಕೆಟ್ ಗಾತ್ರದ ಶೇ. 85ರಷ್ಟಿರಬೇಕು ಎಂದು ಕಡ್ಡಾಯ ಮಾಡುವುದರಿಂದ ಬೀಡಿ ಉದ್ಯಮ ಬಲಿಪಶುವಾಗಬೇಕಾಗುತ್ತದೆ. ಬೀಡಿ ಪ್ಯಾಕೆಟ್‌ಗಳ ಕೋನಾಕೃತಿಯಿಂದಾಗಿ ಗ್ರಾಫಿಕ್ ಗಾತ್ರವನ್ನು ಶೇ. 40ರಿಂದ
85ಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ. ಪ್ಯಾಕೆಟ್ ಗಾತ್ರದ ಪೂರ್ಣ ಎಚ್ಚರಿಕೆ ಲೇಬಲ್ ಬಳಿದರೆ ಬೀಡಿ ಉದ್ಯಮ ಸಾಯುವುದು ಖಂಡಿತ. ಇದನ್ನು ಕೇಂದ್ರ ಸರಕಾರ ಗಮನಿಸಬೇಕು. ಬೀಡಿ ಪ್ಯಾಕೆಟ್‌ನ ಒಂದು ಭಾಗದ ಶೇ. 50ರಷ್ಟು ಭಾಗದಲ್ಲಿ ಮಾತ್ರ ಎಚ್ಚರಿಕೆ ಲೇಬಲ್ ಅಂಟಿಸಿದರೆ ಉತ್ತಮ ಎಂಬ ಸಂಸದೀಯ ಸಮಿತಿಯ ಮನವಿಯನ್ನಾದರೂ ಕೇಂದ್ರ ಸರಕಾರ ಪುರಸ್ಕೃರಿಸಿ, ದೇಶದ ಕೋಟ್ಯಂತರ ಬೀಡಿ ಕಾರ್ಮಿಕರ
ಭವಿಷ್ಯ ಕಾಪಾಡಬೇಕು ಎಂದು ೆಡರೇಶನ್ ಪ್ರಕಟನೆಯ ಮೂಲಕ ಒತ್ತಾಯಿಸಿದೆ.