ಮಂಗಳೂರು : ರಾಜ್ಯ ಸರ್ಕಾರದಿಂದ ಕನಿಷ್ಟ ರೂ 25 ಲಕ್ಷ ಪರಿಹಾರ ಧನವನ್ನು ಒದಗಿಸಿಕೊಡಬೇಕು - ಐವನ್ ಡಿ ಸೋಜಾ
ಮಂಗಳೂರು,ಎ.8:ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಅರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಕನಿಷ್ಟ ರೂ 25 ಲಕ್ಷ ಪರಿಹಾರ ಧನವನ್ನು ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಇವರಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ ಒತ್ತಾಯಿಸಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳ ವಿರುದ್ದ ಹೋರಾಡಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ವಿನಾಯಕ ಬಾಳಿಗಾರ ಕೊಲೆಯ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿ ಇದರಲ್ಲಿ ಭಾಗಿಯಾಗಿರುವ ಪ್ರಮುಖರನ್ನು ಬಂಧಿಸುವ ಮುಖಾಂತರ ಈ ಕೊಲೆಯ ಹಿಂದೆ ಇರುವ ಶಕ್ತಿಗಳ ಬಗ್ಗೆ ಪೊಲೀಸರು ಕ್ರಮ ಕೈಕೊಳ್ಳಬೇಕೆಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರರಲ್ಲಿ ಒತ್ತಾಯಿಸಿದ್ದಾರೆ. ಈ ಕೊಲೆಯು ಹೋರಾಟಗಾರರ ಕೊಲೆಯಾಗಿದ್ದು ಇಂತಹ ಕೊಲೆಯ ಬಗ್ಗೆ ದ್ವನಿ ಹತ್ತಿಕ್ಕಲು ವಿಫಲರಾಗಿರುವ ನಾಯಕರ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಗೃಹಸಚಿವರನ್ನು ಒತ್ತಾಯಿಸಿದ್ದಾರೆ.