×
Ad

ಭಟ್ಕಳ: ಅಂಜುಮನ್‌ಎಐಟಿಎಂಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

Update: 2016-04-08 17:31 IST

ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯಅಂಜುಮನ್ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ಟೆಕ್ನೋಲೊಜಿ ಕಾಲೇಜಿನಲ್ಲಿ ಪದವಿ ಪ್ರಮಾಣ ಪತ್ರ ವಿತರಣಾ ದಿನಾವನ್ನು ಆಚರಿಸಲಾಯಿತು.

2015-16ನೇ ಸಾಲಿನ 150 ವಿದ್ಯಾರ್ಥಿಗಳು ತಮ್ಮ ಪದವಿ ವ್ಯಾಸಂಗವನ್ನು ಪೂರ್ಣಗೊಳಿಸಿದ್ದು ಇವರ ಪದವಿ ಪ್ರಮಾಣಪತ್ರವನ್ನು ವಿತರಸಿಲಾಯಿತು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್‌ಅಲುಮ್ನಿ ಸದಸ್ಯ ಹಾಗೂ ಗೋವಾ ಇಂಜಿನೀಯರಿಂಗ್‌ಕಾಲೇಜಿನ ಪ್ರಾಚಾರ್ಯಡಾ. ವಿನಾಯಕ್‌ಎನ್.ಶೇಟ್ ನೂತನ ಪದವಿಧರರಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಾಶಿಮಜಿ ಮುಹಮ್ಮದ್‌ಅನ್ಸಾರ್ ಪದವಿ ಪ್ರಧಾನ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಖ್, ಕಾರ್ಯದರ್ಶಿ ಅಸಫ್‌ದಾಮುದಿ, ಪ್ರಾಂಶುಪಾಲ ಡಾ.ಮುಸ್ತಾಖ್‌ಆಹ್ಮದ್ ಭಾವಿಕಟ್ಟೆ, ಡಾ.ಉದಯ ಪ್ರಸನ್ನ, ಪ್ರೋ.ಎಚ್.ಎಂ. ಫಾಲಚಂದ್ರ, ಪ್ರೋ.ಫಝಲುರ್ರಹಮಾನ್, ಪ್ರೋ.ಇಕ್ಬಾಲ್‌ಆಹ್ಮದ್, ಪ್ರೋ.ರಾಜಕುಮಾರ್, ಪ್ರೋ.ಇಮಾಮ್ ಹುಸೇನ್, ಪ್ರೋ.ಝಾಹಿದ್‌ಖರೂರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News