×
Ad

ವಿಟ್ಲ : ಮಾಣಿ ಕೊಡಾಜೆಯಲ್ಲಿ ಇಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

Update: 2016-04-08 18:39 IST

ವಿಟ್ಲ : ಅಝಾದ್ ಕ್ರಿಕೆಟರ್ಸ್‌ ಕೊಡಾಜೆ ಹಾಗೂ ಚಾಯ್ಸ್ ಕ್ರಿಕೆಟರ್ಸ್‌ ಪಂತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ 9 ರಂದು (ಇಂದು) ರಾತ್ರಿ ಕೊಡಾಜೆ-ಪಂತಡ್ಕ ಚಾಯ್ಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸುವರು. ಜಿ.ಪಂ. ಸದಸ್ಯರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಪ್ರಥಮ ರೂ. 10,016/-, ದ್ವಿತೀಯ ರೂ. 7,016/- ಹಾಗೂ ಅಝಾದ್ ಟ್ರೋಫಿ ನೀಡಲಾಗುವುದು. ವಿವರಗಳಿಗೆ ಮೊಬೈಲ್ ಸಂಖ್ಯೆ 8105512415 ಅಥವಾ 9632746437ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಎ 11 ರಂದು ಕಬಕದಲ್ಲಿ ಸಮಸ್ತ ನೇತಾರರ ಅನುಷ್ಮರಣಾ ಸಮ್ಮೇಳನ ವಿಟ್ಲ : ಶಂಸುಲ್ ಉಲಮಾ ಕ್ರಿಯಾ ಸಮಿತಿ ಕಬಕ ಇದರ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮವು ಎ 11 ರಂದು ಸಂಜೆ 7 ಗಂಟೆಗೆ ಕಬಕ ಜಂಕ್ಷನ್‌ನಲ್ಲಿ ನಡೆಯಲಿದೆ. ಯಹ್ಯಾ ತಂಙಳ್ ಪೋಳ್ಯ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ಆತೂರು ದುವಾಶಿರ್ವಚನಗೈಯಲಿದ್ದು, ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ಅಧ್ಯಕ್ಷತೆ ವಹಿಸುವರು. ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ಉದ್ಘಾಟಿಸುವರು. ಅಬ್ದುಲ್ ರಝೀರ್ ಅಶ್ರಫಿ ಪಾಣತ್ತೂರು ಮುಖ್ಯ ಭಾಷಣಗೈಯುವರು ಎಂದು ಪ್ರಕಟಣೆ ತಿಳಿಸಿದೆ.  

 ವಿಟ್ಲ : ಕ್ವಾಲಿಟಿ ಫ್ರೆಂಡ್ಸ್ ಮಾಣಿ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಕ್ರಿಕೆಟ್, ಹಗ್ಗ-ಜಗ್ಗಾಟ, ವಾಲಿವಾಲ್ ಹಾಗೂ ಕಬಡ್ಡಿ ಪಂದ್ಯಾಟ ಕ್ವಾಲಿಟಿ ಕ್ರೀಡೋತ್ಸವ-2016 ಕಾರ್ಯಕ್ರಮವು ಮಾಣಿ ಗಾಂಧಿ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಕ್ರೀಡೋತ್ಸವವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿ ಗುತ್ತು ಉದ್ಘಾಟಿಸಿದರು. ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಸದಸ್ಯರುಗಳಾದ ಮಂಜುಳಾ ಕೆ.ಎಂ. ಪೆರಾಜೆ, ಆದಂ ಕುಂಞಿ, ಬಿ.ಎಂ. ಅಬ್ಬಾಸ್ ಅಲಿ, ಗ್ರಾ.ಪಂ. ಸದಸ್ಯರುಗಳಾದ ಸುದೀಪ್ ಶೆಟ್ಟಿ ಕೊಡಾಜೆ, ಲತೀಫ್ ನೇರಳಕಟ್ಟೆ, ನಾರಾಯಣ ಶೆಟ್ಟಿ ತೋಟ, ಕೊರಗಪ್ಪ ಪೂಜಾರಿ ಮಾಣಿ, ಉದ್ಯಮಿಗಳಾದ ಎಂ. ನಾಗರಾಜ ಶೆಟ್ಟಿ ಮಾಣಿ, ಸದಾಶಿವ ಶೆಟ್ಟಿ, ಹರೀಶ್ ಶೆಟ್ಟಿ ಸಾಗು, ತಾ.ಪಂ. ಮಾಜಿ ಸದಸ್ಯರುಗಳಾದ ಮಾಧವ ಮಾವೆ, ಕುಶಲ ಎಂ. ಪೆರಾಜೆ, ಡಾ. ಶ್ರೀನಾಥ್ ಆಳ್ವ, ಸಿ.ಎ. ಬ್ಯಾಂಕ್ ಮಾಣಿ ಶಾಖಾಧಿಕಾರಿ ಸಂಜೀವ ಪೂಜಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಮೀದ್ ಮಾಣಿ, ಬೇಬಿ ಸುವರ್ಣ, ಮಜೀದ್, ದಯಾನಂದ, ಸಂದೀಪ್, ಸಲೀಂ, ಹಬೀಬ್ ಕೆ. ಮಾಣಿ, ಮೂಸಾ ಕರೀಂ ಮೊದಲಾದವರು ಉಪಸ್ಥಿತರಿದ್ದರು.

ತಿಲಕ್ ಸ್ವಾಗತಿಸಿ, ವಿಕೇಶ್ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಆಳ್ಬ ಕಾರ್ಯಕ್ರಮ ನಿರೂಪಿಸಿದರು.

ಕಬಡ್ಡಿ ಪ್ರಶಸ್ತಿ :

ಪ್ರೊ ಕಬಡ್ಡಿ ಮಾದರಿ ಲೀಗ್ ಕಂಬಡ್ಡಿ ಪಂದ್ಯಾಟದಲ್ಲಿ ಎಂ. ನಾಗರಾಜ್ ಶೆಟ್ಟಿ ಮತ್ತು ಸುದೀಪ್ ಶೆಟ್ಟಿ ಮಾಲಕತ್ವದ ಕಿಂಗ್ ಕೋಬ್ರಾ ಮಾಣಿ ತಂಡವು ಪ್ರಥಮ, ಕುಶಲ ಎಂ. ಪೆರಾಜೆ ಮಾಲಕತ್ವದ ಪಿಂಕ್ ಪ್ಯಾಂಥರ್ಸ್‌ ಪೆರಾಜೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಕೋಡಿ ವಾರಿಯರ್ಸ್‌ ಕೋಡಿ ತಂಡವು ತೃತೀಯ ಹಾಗೂ ಅನಂತಾಡಿ ಟೈಗರ್ಸ್‌ ತಂಡವು ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಕಿಂಗ್ ಕೋಬ್ರಾ ಮಾಣಿ ತಂಡದ ನವೀನ ಆಲ್‌ರೌಂಡರ್ ಹಾಗೂ ಪ್ರಕಾಶ್ ಉತ್ತಮ ದಾಳಿಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪೆರಾಜೆ ತಂಡದ ದಿನೇಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡರು. ಕ್ರಿಕೆಟ್ : ಪಂದ್ಯಾಟದಲ್ಲಿ ಮಜ್ದಾ ಕ್ರಿಕೆಟರ್ಸ್‌ ಸಜಿಪ ತಂಡವು ಪ್ರಥಮ ಹಾಗೂ ರೆಡ್ ಗೈಸ್ ಸೂರಿಕುಮೇರು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸಜಿಪ ತಂಡದ ರಹೀಂ ಉತ್ತಮ ಎಸೆತಗಾರ, ಹೈದರ್ ಉತ್ತಮ ಹೊಡೆತಗಾರ ಹಾಗೂ ಸೂರಿಕುಮೇರು ತಂಡದ ಅಜಿತ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು. ವಾಲಿಬಾಲ್

ಪಂದ್ಯಾಟದಲ್ಲಿ ಬಾಲ್ ಬ್ಲಸ್ಟರ್ಸ್‌ ಬೊಳ್ಳಾಯಿ ತಂಡ ಪ್ರಥಮ, ಯುವ ಬ್ರಿಗೇಡ್ ಕಡೇಶ್ವಾಲ್ಯ ತಂಡ ದ್ವಿತೀಯ, ಸೂಪರ್ ಸ್ಟಾರ್ ಅಡ್ಲಬೆಟ್ಟು ತಂಡ ತೃತೀಯ ಹಾಗೂ ರೋಕ್ ವಾರಿಯರ್ಸ್‌ ಪೆರ್ನೆ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಹಗ್ಗ-ಜಗ್ಗಾಟ

ಪಂದ್ಯಾಟದಲ್ಲಿ ಕಾಪುವಿನ ಕೈಪುಂಜೆ ತಂಡ ಪ್ರಥಮ, ಬಿ.ಸಿ.ರೋಡಿನ ಶ್ರೀ ರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ದ್ವಿತೀಯ, ಪಣೋಲಿಬೈಲು ಫ್ರೆಂಡ್ಸ್ ತಂಡ ತೃತೀಯ ಹಾಗೂ ಬಿ.ಸಿ.ರೋಡಿನ ಶ್ರೀ ರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News