×
Ad

ಮಂಗಳೂರು : ಮೇ 1ರಂದು ರೊಸಾರಿಯೊ ಚರ್ಚ್‌ನಲ್ಲಿ ಸಾಮೂಹಿಕ ವಿವಾಹ

Update: 2016-04-08 21:22 IST

ಮಂಗಳೂರು, ಎ. 8: ನಗರದ ರೊಸಾರಿಯೊ ಚರ್ಚ್ ಅಧೀನದ ಸಂತ ವಿನ್ಸೆಂಟ್ ದಿ.ಪಾವ್ಲ್ ಸೊಸೈಟಿ ವತಿಯಿಂದ ವರ್ಷಂಪ್ರತಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಈ ಬಾರಿ ಮೇ 1ರಂದು ನಡೆಯಲಿದೆ.

ಈ ವಿವಾಹ ಕಾರ್ಯಕ್ರಮದಲ್ಲಿ ಕ್ಯಾಥೊಲಿಕ್ ಕ್ರೈಸ್ತ ಜೋಡಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇದ್ದು, ಅಂತರ್ ಜಾತಿ ಮತ್ತು ಎರಡನೆ ವಿವಾಹಕ್ಕೆ ಅವಕಾಶ ಇಲ್ಲ. ಇದರ ಸದುಪಯೋಗ ಪಡೆಯಲು ಇಚ್ಛಿಸುವ ಜೋಡಿಗಳು ತಮ್ಮ ಹೆಸರುಗಳನ್ನು ಎಪ್ರಿಲ್ 15ರೊಳಗೆ ರೊಸಾರಿಯೊ ಚರ್ಚ್ ಕಚೇರಿ ಅಥವಾ ಎಸ್.ವಿ.ಪಿ. ಅಧ್ಯಕ್ಷರಲ್ಲಿ ನೋಂದಾಯಿಸಿಕೊಳ್ಳಬಹುದು. ವಧು-ವರರಿಗೆ ಈ ಬಾರಿ ವಿಶೇಷವಾಗಿ ಚಿನ್ನದ ಉಂಗುರ ಹಾಗೂ ಇತರ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

 ಹೆಚ್ಚಿನ ಮಾಹಿತಿಗಾಗಿ ಚರ್ಚ್ ಧರ್ಮಗುರು ರೆ.ಫಾ. ಜೆ.ಬಿ.ಕ್ರಾಸ್ತಾ ದೂರವಾಣಿ ಸಂಖ್ಯೆ 0824-2420942 ಅಥವಾ ಸಿ.ಜೆ.ಸೈಮನ್ ಮೊಬೈಲ್ ಸಂಖ್ಯೆ 9844921299ನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News