ತಾಪಮಾನ ಹೆಚ್ಚಳದಿಂದ ಅಡಿಕೆ ಬೆಳೆಗೆ ಅಪಾಯ: ಪಿ.ಚೌಡಪ್ಪ
Update: 2016-04-08 23:26 IST
ಕಾಸರಗೋಡು, ಎ.8: ಅಡಿಕೆ ನಲ್ಲಿ ಉದುರಲು ಮತ್ತು ಹಿಂಗಾರ ಒಣಗಲು ತಾಪಮಾನ ಹೆಚ್ಚಳ ಕಾರಣ ಎಂದು ಕೇಂದ್ರ ತೋಟ ಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ)ದ ನಿರ್ದೇಶಕ ಪಿ.ಚೌಡಪ್ಪತಿಳಿಸಿದ್ದಾರೆ.
ಕರ್ನಾಟಕ ಹಾಗೂ ಕೇರಳದ ತಾಪಮಾನ ಈ ವರ್ಷ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ‘ಕೊಲೆಟೊಟ್ರೈಕಂ ಗ್ಲಿಯೋ ಸ್ಪೊರೊಯಡಸ್’ ಎಂಬ ಶಿಲೀಂಧ್ರ ಹಿಂಗಾರ ಒಣಗಲು ಕಾರಣ ವಾಗುತ್ತಿದೆ. ಹೆಚ್ಚಿದ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ನೀರು ಹಾಯಿಸುವ ಮೂಲಕ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಚಿಕ್ಕ ಕಾಯಿ ಉದುರುವುದು ತೀವ್ರವಾದಲ್ಲಿ ಪೊಟಾಶ್‌ಗೆ ಹೊರತಾಗಿ ಗಿಡವೊಂದಕ್ಕೆ 150 ಗ್ರಾಂ ಮ್ಯೂರಿಯಟ್ ಆಫ್ ಪೊಟಾಷ್‌ನ್ನು ನೀರು ಹಾಯಿಸುವ ಸಂದರ್ಭದಲ್ಲಿ ಬಳಸಬೇಕು ಎಂದು ಚೌಡಪ್ಪಪ್ರಕಟನೆಯಲ್ಲಿ ತಿಳಿಸಿದ್ದಾರೆ.