×
Ad

ಕುಂಬಳೆ: ರೈಲು ಢಿಕ್ಕಿಯಾಗಿ ಯುವಕ ಮೃತ್ಯು

Update: 2016-04-08 23:52 IST

ಕಾಸರಗೋಡು, ಎ.8: ಮೊಬೈಲ್‌ನಲ್ಲಿ ಮಾತ ನಾಡಿಕೊಂಡು ರೈಲ್ವೆ ಹಳಿ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಿಹಾರ ಮೂಲದ ಯುವ ಕನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ.

  ಮೃತಪಟ್ಟ ಯುವಕನನ್ನು ಬಿಹಾರ ಮೂಲದ ಮೋಹನ್ ಶಾ (29) ಎಂದು ಗುರುತಿಸಲಾಗಿದೆ. ಡಾಮರೀಕರಣ ಘಟಕದ ಕಾರ್ಮಿಕನಾಗಿದ್ದ ಈತ ಗುರುವಾರ ರಾತ್ರಿ ಕುಂಬಳೆ ಪೆರುವಾಡ್ ಸಮೀಪ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದುದ್ದರಿಂದ ಹಿಂದಿನಿಂದ ರೈಲು ಬರುತ್ತಿರುವುದು ಗಮನಕ್ಕೆ ಬಾರದೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

 ಇತರ ಕಾರ್ಮಿಕರು ಈತನನ್ನು ಹುಡುಕಿಕೊಂಡು ಬಂದಾಗ ರೈಲ್ವೆ ಹಳಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಮೋಹನ್ ಶಾಪತ್ತೆಯಾಗಿದ್ದಾನೆ. ಕೂಡಲೇ ಗಾಯಾಳುವನ್ನು ಮಂಗ ಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News