×
Ad

ನಾಯಿಯ ಹೆಸರು ಉಗ್ರ ಸಂಘಟನೆಗೆ ಹೋಲಿಕೆಯಾಗುತ್ತಿದೆಯೆಂದು ಆನ್‌ಲೈನ್ ಹಣ ವರ್ಗಾಯಿಸಲು ನಿರಾಕರಿಸಿದ ಬ್ಯಾಂಕ್ !

Update: 2016-04-09 12:42 IST
ಸಾಂದರ್ಭಿಕ ಚಿತ್ರ

ಸ್ಯಾನ್ ಫ್ರಾನ್ಸಿಸ್ಕೋ : ನಾಯಿಯ ಹೆಸರೊಂದು ಉಗ್ರ ಸಂಘಟನೆಗೆ ಹೋಲಿಕೆಯಾಗುತ್ತಿದೆಯೆಂಬ ವಿಚಿತ್ರ ಕಾರಣ ನೀಡಿ ಬ್ಯಾಂಕೊಂದು ಸ್ಯಾನ್ ಫ್ರಾನ್ಸಿಸ್ಕೋದಬ್ರೂಸ್ ಫ್ರಾನ್ಸಿಸ್ ಎಂಬ ವ್ಯಕ್ತಿಯೊಬ್ಬತನ್ನ ಡಾಗ್ ವಾಕರ್ ಮಹಿಳೆಗೆ ಮಾಡಿದ ಆನ್‌ಲೈನ್ ಪಾವತಿಯನ್ನು ವರ್ಗಾಯಿಸಲು ನಿರಾಕರಿಸಿದ ಘಟನೆ ವರದಿಯಾಗಿದೆ.

ಬ್ರೂಸ್ ಫ್ರಾನ್ಸಿಸ್‌ನ ನಾಯಿಯ ಹೆಸರು ‘ಡ್ಯಾಶ್’ ಆಗಿದ್ದು ಅದು ಉಗ್ರ ಸಂಘಟನೆ ಐಸ್ಲಾಮಿಕ್ ಸ್ಟೇಟ್‌ನ ಇನ್ನೊಂದು ಹೆಸರು‘ಡಾಯಿಶ್’ಗೆ ಹೋಲಿಕೆ ಹೊಂದಿದೆಯೆಂಬುದೇ ಇಲ್ಲಿ ಸಮಸ್ಯೆಯಾಗಿದೆ. ಫ್ರಾನ್ಸಿಸ್ ಪ್ರತಿ ತಿಂಗಳು ತನ್ನ ಬ್ಯಾಂಕ್ ಖಾತೆಯಿಂದಕಳೆದ ಎರಡು ವರ್ಷಗಳಿಂದೀಚೆಗೆ 374 ಡಾಲರ್ ಮೊತ್ತವನ್ನು ತನ್ನ ಡಾಗ್ ವಾಕರ್ ಮಹಿಳೆಗೆ ಆನ್‌ಲೈನ್ ಮುಖಾಂತರ ವರ್ಗಾಯಿಸುತ್ತಿದ್ದ.ಆದರೆ ಈ ಬಾರಿ ಚೇಸ್ ಬ್ಯಾಂಕರ್ ಈ  ಆನ್‌ಲೈನ್ ಪೇಮೆಂಟನ್ನು ಡಾಗ್ ವಾಕರ್ ಖಾತೆಗೆ ವರ್ಗಾಯಿಸಲು ನಿರಾಕರಿಸಿದೆ. ತನ್ನ ಖಾತೆಗೆ ಹಣ ವರ್ಗಾವಣೆಯಾಗಿಲ್ಲವೆಂದು 10 ದಿನಗಳ ನಂತರ ಡಾಗ್ ವಾಕರ್ ಹೇಳಿದಾಗಲೇ ಫ್ರಾನ್ಸಿಸ್‌ಗೆ ಇದು ತಿಳಿದಿದ್ದು.


ತನ್ನ ಬ್ಯಾಂಕ್ ಖಾತೆಗೆ ಲಾಗ್ ಇನ್ ಮಾಡಿದಾಗ ಅಲ್ಲಿ ‘ಡ್ಯಾಶ್ ಅಂದರೇನು?’ ಎಂದು ವಿವರಿಸುವಂತೆ ಬ್ಯಾಂಕ್ ಹೇಳಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಫ್ರಾನ್ಸಿಸ್ಅಪರೂಪದ ಮಸ್ಕ್ಯುಲರ್ ಡಿಸ್ಟ್ರೋಫಿ ಸಮಸ್ಯೆಯಿಂದ ಬಳಲುತ್ತಿದ್ದುತನ್ನ 9 ವರ್ಷದ ಸರ್ವಿಸ್ ನಾಯಿಯ ಮೇಲೆ ಅವಲಂಬಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News