×
Ad

ಕಾರ್ಕಳ: 1.20 ಕೋಟಿ ರೂ. ಅನುದಾನಸದಸ್ಯರಶ್ಲಾಘನೆ.

Update: 2016-04-09 17:02 IST

ಕಾರ್ಕಳ: ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್‌ ಯೋಜನೆಯಡಿ ಆನೆಕೆರೆಯಿಂದ ಹಿರಿಯಂಗಡಿ ಬಸದಿಯ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನವನ್ನು ಬಿಡುಗಡೆ ಗೊಳಿಸಿದ ರಾಜ್ಯಸರಕಾರವನ್ನುಅಭಿನಂದಿಸುವುದಾಗಿ ಪುರಸಭೆ ನಾಮನಿರ್ದೇಶಕ ಸದಸ್ಯರು ತಿಳಿಸಿದ್ದಾರೆ.
ಅನುದಾನ ಬಿಡುಗಡೆಗೆ ಸಹಕರಿಸಿದ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರು, ಜಿಲ್ಲಾಉಸ್ತುವಾರಿ ಸಚಿವರು ಮತ್ತು ಸಹಕರಿಸಿದ ಮಾಜಿ ಶಾಸಕ ಗೋಪಾಲಭಂಡಾರಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿವೇಕಾನಂದಶೆಣೈ, ಪ್ರತಿಮಾಮೋಹನ್, ಸುನಿಲ್‌ಕೋಟ್ಯಾನ್, ಮತ್ತು ಪ್ರಭಾಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ನಡೆಯಬೇಕಾಗಿದ್ದು, ಈಗಾಗಲೇ ಮಾಜಿ ಶಾಸಕರ ಮೂಲಕ ಮನವಿ ಸಲ್ಲಿಸಲಾಗಿದ್ದು, ರಾಜ್ಯ ಸರಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News