ಮಂಗಳೂರು : ಹೈಮದ್ ಹುಸೇನ್ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ:ಜನಾರ್ದನ ಪೂಜಾರಿ
ಮಂಗಳೂರು, ಎ.9: ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ ಅವರ ಕಾಲಿನ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಘೋಷಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೈಮದ್ ಹುಸೇನ್ ಅವರ ಕುಟುಂಬಕ್ಕೆ ನನ್ನ ನಿಧಿಯಿಂದ 25 ಸಾವಿರ, ಶಾಸಕ ಜೆ.ಆರ್. ಲೋಬೋ ಅವರ 25 ಸಾವಿರ , ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ 25 ಸಾವಿರ ಮತ್ತು ಪುತ್ರ ದೀಪಕ್ ಪೂಜಾರಿಯಿಂದ 25 ಸಾವಿರ ರೂಪಾಯಿಯನ್ನು ಒಟ್ಟು ಸೇರಿಸಿ ಒಂದು ಲಕ್ಷ ರೂಪಾಯಿಯನ್ನು ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡಲಾಗುವುದು ಎಂದು ಘೋಷಿಸಿದರು.
ಪರಿಣಾಮಾಕಾರಿಯಾಗಿ ವರದಿಯನ್ನು ಬರೆಯುತ್ತಿದ್ದ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಲ್ಲಿ ಅವರು ನಿಧನರಾಗಿರುವುದು ದುಖ ತಂದಿದೆ ಎಂದು ಹೇಳಿದರು.
ಇದೇ ವೇಳೆ ಹೈಮದ್ ಹುಸೇನ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ವೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ ಅಕಾಲಿಕ ನಿಧನಕ್ಕೆ ಇಂದು ದ.ಕ ಜಿಲ್ಲಾ ಕಾರ್ಯನಿರ್ವಾಹಕ ಪತ್ರಕರ್ತರ ಸಂಘದಿಂದ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತು.
ಹೈಮದ್ ಹುಸೇನ್ ಅವರ ನಿಧನಕ್ಕೆ ಒಂದು ನಿಮಿಷದ ವೌನ ಪ್ರಾರ್ಥನೆಯನ್ನು ಮಾಡಲಾಯಿತು.
ಶೃದ್ದಾಂಜಲಿ ಸಭೆಯಲ್ಲಿ ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸಹ್ಯಾದ್ರಿ ಸಂಚಯ ಮುಖಂಡ ದಿನೇಶ್ ಹೊಳ್ಳ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ರವಿ ಕಾಮಿಲ, ಆರೀಫ್ ಪಡುಬಿದ್ರೆ, ಸತ್ಯಾ, ಪುಷ್ಪರಾಜ್ ಬಿ.ಎನ್, ವಿಜಯ್ ಕೋಟ್ಯಾನ್ ಪಡು, ರಾಘವ್,ಗುರುವಪ್ಪ ಬಾಳೆಪುಣಿ, ಪ್ರಜಾವಾಣಿ ಸುರೇಶ್ ಬೆಳಗಜೆ, ಸುಬ್ರಹ್ಮಣ್ಯ, ವೇಣು ವಿನೋದ್, ಸುರೇಶ್ ಪಳ್ಳಿ, ನರಸಿಂಹ ಮೂರ್ತಿ, ಶ್ರೀನಿವಾಸ ಮೊದಲಾದವರು ನುಡಿನಮನ ಸಲ್ಲಿಸಿದರು. ಇದೇ ವೇಳೆ ಹೈಮದ್ ಹುಸೇನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ,ಪ್ರಕಾಶ್ ಪಾಂಡೇಶ್ವರ, ಉಪಸ್ಥಿತರಿದ್ದರು.